ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲಿ ಮಿಲಿಟರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಇಸ್ರೇಲಿ ಮಿಲಿಟರಿ ಗಾಜಾದ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ.ಸೆಂಟ್ರಲ್ ಗಾಜಾ ನಗರದಲ್ಲಿನ ಪ್ಯಾಲೆಸ್ಟೀನಿಯಾದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

‘ಐಡಿಎಫ್ (ಇಸ್ರೇಲಿ ಮಿಲಿಟರಿ) ಪ್ರಸ್ತುತ ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುತ್ತಿದೆ. ಇಸ್ರೇಲಿ ಹೋಮ್ ಫ್ರಂಟ್‌ನಲ್ಲಿ ವಿಶೇಷ ಪರಿಸ್ಥಿತಿಯನ್ನು ಘೋಷಿಸಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.

ಸೆಂಟ್ರಲ್ ರಿಮಲ್ ನೆರೆಹೊರೆಯ ಅಪಾರ್ಟ್ಮೆಂಟ್ ಮೇಲೆ ವಾಯುದಾಳಿ ನಡೆದಿದೆ ಎಂದು ಗಾಜಾ ನಗರದಲ್ಲಿನ ಪ್ಯಾಲೆಸ್ಟೀನಿಯಾದವರು ಸುದ್ದಿಸಂಸ್ಥೆ ಎಎಫ್​​ಪಿಗೆ ತಿಳಿಸಿದ್ದಾರೆ. ಪ್ಯಾಲೆಸ್ತೀನಿಯನ್ ಎನ್‌ಕ್ಲೇವ್‌ನ ಭದ್ರತಾ ಮೂಲಗಳು ಭೂಪ್ರದೇಶದ ಹಲವಾರು ಭಾಗಗಳಲ್ಲಿ ವಾಯುದಾಳಿ ನಡೆದಿದೆ ಎಂದು ತಿಳಿಸಿವೆ.

ಇಸ್ರೇಲ್ ಗಾಜಾದೊಂದಿಗಿನ ತನ್ನ ಎರಡು ಗಡಿ ಕ್ರಾಸಿಂಗ್ ಮುಚ್ಚಿದ ನಾಲ್ಕು ದಿನಗಳ ನಂತರ ಮತ್ತು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಗಡಿ ಸಮೀಪ ವಾಸಿಸುವ ಇಸ್ರೇಲಿ ನಾಗರಿಕರ ಸಂಚಾರ ನಿರ್ಬಂಧಿಸಿದ ನಂತರ ಈ ದಾಳಿ ನಡೆದಿದೆ.

ಈ ದಾಳಿಯಿಂದ ಹಲವಾರು ಸಾವು ನೋವುಗಳು ಸಂಭವಿಸಿವೆ ಮತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಗಾಜಾ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗಾಜಾದ ಹೊರಗೆ ಚಿಕಿತ್ಸೆ ಅಗತ್ಯವಿರುವ ಪ್ರತಿದಿನ 50 ರೋಗಿಗಳ ಮೇಲೆ ಇದು ಪರಿಣಾಮ ಬೀರಿದೆ.

ಗಾಜಾದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿರುವ ಭಯೋತ್ಪಾದಕ ಗುಂಪಿನ ಇಸ್ಲಾಮಿಕ್ ಜಿಹಾದ್‌ನ ಇಬ್ಬರು ಹಿರಿಯ ಸದಸ್ಯರನ್ನು ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಬಂಧಿಸಿದ ನಂತರ ಈ ದಾಳಿ ಮಾಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!