ತ್ರೈಮಾಸಿಕದಲ್ಲಿ ಅತಿ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡ ಐಟಿ ದಿಗ್ಗಜ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದಲ್ಲಿನ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (IT) ಸೇವೆಗಳ ಕಂಪನಿಯಾದ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 14,136 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

ಮಾಹಿತಿಗಳ ಪ್ರಕಾರ ಜೂನ್ 30 ರ ಹೊತ್ತಿಗೆ TCS ನ ಉದ್ಯೋಗಿಗಳ ಸಂಖ್ಯೆ 6,06,331ರಷ್ಟಿದೆ. ಮೊದಲ ತ್ರೈಮಾಸಿಕದಲ್ಲೇ 14,136 ಉದ್ಯೋಗಿಗಳನ್ನು ಸೇರಿಸಿಕೊಳ್ಳಲಾಗಿದೆ. ಇದಲ್ಲದೇ ವೇತನವನ್ನೂ ಕೂಡ ಶೇ.8 ರಷ್ಟು ಏರಿಕೆ ಮಾಡಲಾಗಿದೆ. “ವಾರ್ಷಿಕ ಪರಿಶೀಲನೆ ನಡೆಸಿದ ನಂತರ ಉದ್ಯೋಗಿಗಳಿಗೆ 5 ರಿಂದ 8% ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಹೆಚ್ಚು ಕಾರ್ಯಕ್ಷಮತೆ ತೋರಿಸಿದವರು ಇನ್ನೂ ಹೆಚ್ಚಿನ ಏರಿಕೆ ಪಡೆಯಲಿದ್ದಾರೆ, ನಮ್ಮ ಕಾರ್ಯಕ್ಷಮತೆ-ಚಾಲಿತ ಕೆಲಸದ ಸಂಸ್ಕೃತಿಯು ನಮ್ಮ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಥಳೀಯ ಪ್ರತಿಭೆಗಳನ್ನು ಆಕರ್ಷಿಸಲು ನಮಗೆ ಸಹಾಯ ಮಾಡುತ್ತಿದೆ. ಅತಿ ಹೆಚ್ಚು ನೇಮಕಾತಿ ಮಾಡುವ ಮೂಲಕ ಟಿಸಿಎಸ್‌ ತ್ರೈಮಾಸಿಕ ಮೈಲಿಗಲ್ಲು ಸಾಧಿಸಿದೆ, ಉದ್ಯೋಗಿಗಳ ಬಲವು 6,00,000 ಕ್ಕೆ ಏರಿಕೆಯಾಗಿದೆ” ಎಂದು ಟಿಸಿಎಸ್‌ನ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

ಪ್ರಸ್ತುತ ಟಿಸಿಎಸ್‌ ನಲ್ಲಿ 153 ಬೇರೆ ಬೇರೆ ರಾಷ್ಟ್ರಗಳ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು 35.5% ದಷ್ಟು ಮಹಿಳೆಯರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!