Friday, June 2, 2023

Latest Posts

ಆಸ್ಟ್ರೇಲಿಯಾದಲ್ಲಿ ಭರ್ಜರಿ ಓಪನಿಂಗ್ ಪಡೆದ ದಿ ಕೇರಳ ಸ್ಟೋರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಸಂಚಲನ ಸೃಷ್ಟಿಸಿರುವ ದಿ ಕೇರಳ ಸ್ಟೋರಿ (The Kerala Story) ಇದೀಗ ವಿದೇಶದಲ್ಲೂ ರಿಲೀಸ್ ಆಗಿದೆ. ಆಸ್ಟ್ರೇಲಿಯಾ (Australia), ಅಮೆರಿಕ (America) ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

ಇನ್ನು ಆಸ್ಟ್ರೇಲಿಯಾದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡ ಸಿನಿಮಾ, ರಿಲೀಸ್ ಆಗಿ ಎರಡನೇ ದಿನಕ್ಕೆ 46 ಲಕ್ಷ ರೂಪಾಯಿ ಕಮಾಯಿ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೇ, ಅಮೆರಿಕಾದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಿ ಕೇರಳ ಸ್ಟೋರಿ ಇಂದು ನೂರು ಕೋಟಿ ಕ್ಲಬ್ ಸೇರಲಿದೆ. ಸತತ ಎರಡು ವಾರಗಳಿಂದ ಬಾಕ್ಸ್ ಆಫೀಸ್ (Box Office) ದೋಚುತ್ತಿರುವ ಸಿನಿಮಾ ನಿನ್ನೆಗೆ ರೂ.93.37 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ದಿನಕ್ಕೆ ಅಂದಾಜು 12 ಕೋಟಿ ರೂಪಾಯಿ ಗಳಿಕೆ ಮಾಡುತ್ತಿರುವುದರಿಂದ ಇಂದು ಸಿನಿಮಾ ನೂರು ಕೋಟಿ ಕ್ಲಬ್ ಸೇರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!