ಹೊಸದಿಗಂತ ಹಳಿಯಾಳ :
2017 ರಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಳ್ಳತನದ ಆರೋಪಿಯನ್ನು ಹಳಿಯಾಳ ಪೋಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂಬ್ರಾಣಿ ಅರಣ್ಯ ವಲಯದ ಪ್ರಕರಣಗಳಲ್ಲಿ ಹಾಗೂ ಅರಣ್ಯ ಇಲಾಖೆಯ ಇನ್ನಿತರ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯು ಜಿಲ್ಲೆಯ 5 ಠಾಣೆಗಳಿಗೆ ಹಾಗೂ ರಾಜ್ಯದ 20 ಕ್ಕೂ ಹೆಚ್ಚಿನ ಠಾಣೆಗಳ ಪ್ರಕರಣಗಳಲ್ಲಿ ಹುಡುಕುತ್ತಿರುವ ಪ್ರಮುಖ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
78 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಶಿವರಾಜ ಅಲಿಯಾಸ ಶಿವು ರುದ್ರಯ್ಯ ಹಿರೇಮಠ ಜಾಮೀನಿನ ಮೇಲೆ 2017 ರಲ್ಲಿ ಹೊರಗಿದ್ದು ಕಾಲ ಕಾಲಕ್ಕೆ ನ್ಯಾಯಾಲಯಕ್ಕೆ ಹಾಜರಾಗ ಬೇಕಾಗಿದ್ದವನು ತಲೆಮರೆಸಿಕೊಂಡು ಪೋಲೀಸ್ ಇಲಾಖೆಗೆ ತಲೆ ನೋವಾಗಿದ್ದನು. ಈತನನ್ನು ಹುಡುಕಿ ಬಂಧಿಸಲು ನ್ಯಾಯಾಲಯದಿಂದ ತೀವ್ರ ಒತ್ತಡ ಕೂಡ ಇದ್ದಿದ್ದರಿಂದ ಸಿಪಿಆಯ್ ಜಯಪಾಲ ಪಾಟೀಲ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ವಿನೋದ ಎಸ್ ಕೆ (ಕಾ.ಮತ್ತು ಸು.) ಹಾಗೂ ಪಿಎಸ್ಐ ಕೆ ಎನ್ ಅರಕೇರಿ (ತನಿಖೆ) ಇವರ ನೇತ್ರತ್ವದಲ್ಲಿ ಎಎಸ್ಐ ಸಂಜು ಅಣ್ಣಿಕೇರಿ, ಸಿ ಎಚ್ ಸಿ ಗಳಾದ ಭೀಮಣ್ಣ ಕೆ, ನಬೀಸಾಬ ಬೈರವಾಡಗಿ, ಸಂತೋಷ ಲಮಾಣಿ ಹಾಗೂ ಸಿಪಿಸಿ ರಾಘವೇಂದ್ರ ಕೆರೆವಾಡ ತಂಡವು ಸೂಕ್ತ ಮಾಹಿತಿ ಕಲೆ ಹಾಕಿ ನಿಖರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಪ್ರಕರಣ ಭೇದಿಸಿದ ತಂಡದ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ಉ.ಕ. ಎಸ್ಪಿಯವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿದ್ದಾರೆ.