ಹಣಕ್ಕಾಗಿ ಗೆಳತಿಯನ್ನೇ ಕೊಂದು 4 ದಿನ ಮೆಡಿಕಲ್ ಸ್ಟೋರ್‌ನಲ್ಲೇ ಇಟ್ಕೊಂಡಿದ್ದ ಹಂತಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಶ್ರದ್ಧಾ ಹತ್ಯೆ ಮಾದರಿಯಲ್ಲೇ ಮತ್ತೊಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದ್ದು, ತನ್ನ ಗೆಳತಿಯನ್ನು ಕೊಂದು ನಾಲ್ಕು ದಿನಗಳ ಕಾಲ ಮೆಡಿಕಲ್ ಸ್ಟೋರ್‌ನಲ್ಲಿ ಹಂತಕ ಇಟ್ಟಿದ್ದನು.

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ವ್ಯಕ್ತಿಯು ಹಣದ ಮೇಲಿನ ಮೋಹಕ್ಕಾಗಿ ಪ್ರೀತಿಸಿದವಳನ್ನೇ ಕೊಂದಿದ್ದಾನೆ.

ಮೆಡಿಕಲ್ ಸ್ಟೋರ್ ಮಾಲೀಕ ಆಶಿಶ್ ಸಾಹು ಹಣದ ಸಮಸ್ಯೆಯಿಂದ ಪ್ರಿಯಾಂಕಾಳನ್ನು ಕೊಂದು ಶವವನ್ನು 4 ದಿನಗಳ ಕಾಲ ತನ್ನ ಅಂಗಡಿಯಲ್ಲಿಟ್ಟು ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದನು. ಬಳಿಕ ಶವವನ್ನು ಬೇರೆ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಿಯಾಂಕಾ ಬಿಲಾಸ್‌ಪುರದ ಹಾಸ್ಟೆಲ್‌ನಲ್ಲಿ ಕೆಪಿಎಸ್‌ಸಿ (KPSC) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಈ ವೇಳೆ ಆಶಿಶ್ ಸಾಹು ಜೊತೆಗೆ ಆತ್ಮೀಯತೆ ಬೆಳೆದಿದೆ. ನಂತರ ಇಬ್ಬರು ಒಟ್ಟಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿನ ನಷ್ಟದ ನಂತರ ತನ್ನಿಂದ ಸಾಲ ಪಡೆದಿದ್ದ 11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಆಶಿಶ್‌ಗೆ ಒತ್ತಡ ಹೇರುತ್ತಿದ್ದಳು ಎಂದು ಬಿಲಾಸ್‌ಪುರದ ಎಸ್ಪಿ ಪಾರುಲ್ ಮಾಥುರ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಿಲಾಸ್‌ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಕುಟುಂಬವು ನಾಪತ್ತೆ ದೂರು ದಾಖಲಿಸಿತ್ತು. ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಸಾಹುವನ್ನು ಪ್ರಮುಖ ಆರೋಪಿ ಎಂದು ಶಂಕಿಸಿದ್ದು, ಆತನ ಮೇಲೆ ಕಣ್ಣಿಟ್ಟಿತ್ತು. ಕುಟುಂಬದ ಸದಸ್ಯರೊಬ್ಬರು ಪ್ರಿಯಾಂಕಾ ಮತ್ತು ಸಾಹು ಇಬ್ಬರು ಪರಿಚಿತರು. ಅಲ್ಲದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಬಹಿರಂಗಪಡಿಸಿದ್ದರು. ಬಳಿಕ ಪೊಲೀಸರು ಸಾಹು ಅಂಗಡಿ ಮತ್ತು ನಿವಾಸದ ಸುತ್ತಮುತ್ತಲಿನ ಸಿಸಿಟಿವಿಯ ದೃಶ್ಯಗಳ ಜೊತೆಗೆ ಅವನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಶವ ಸಾಗಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಪ್ರದೀಪ್ ಆರ್ಯ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!