ಮುಸಲಧಾರೆ ಹೊಡೆತಕ್ಕೆ ಇನ್ನೂ ಚೇತರಿಸದ ಅರಬರ ನಾಡು: ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಟೊಂಕಕಟ್ಟಿದ ಆಡಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದುವರೆಗೆ ಕಂಡುಕೇಳರಿಯದ ಮಳೆಗೆ ತತ್ತರಿಸಿರುವ ಅರಬರ ನಾಡು ಯುಎಇ ಈಗ ಪರಿಸ್ಥಿತಿಯಿಂದ ಬಚವಾಗಲು ಹೆಣಗಾಡುತ್ತಿದೆ.

ವರ್ಷಧಾರೆಯಿಂದ ಹೈರಾಣಾಗಿರುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಸೇವೆ ಸಹಜ ಸ್ಥಿತಿಗೆ ತರುವ ಕಾರ್ಯ ಬಿರುಸಿನಿಂದ ಸಾಗುತ್ತಿದೆಯಾದರೂ ಅದಿನ್ನೂ ಫಲ ನೀಡಿಲ್ಲ. ಈ ನಡುವೆ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ನಾಗರಿಕರಿಗೆ ಸಂದೇಶ ನೀಡಿದ್ದು, ಯುಎಇ ಮೂಲಸೌಕರ್ಯದ ಸ್ಥಿತಿಗತಿ ಕುರಿತು ಕೂಡಲೇ ಅಧ್ಯಯನ ನಡೆಸಲು ಮತ್ತು ಮಳೆಯಿಂದ ಆಗಿರುವ ಹಾನಿಯಿಂದ ಹೊರಬರಲು ಪರಿಹಾರ ಹುಡುಕಲಾಗುವುದು ಎಂದು ಹೇಳಿದ್ದಾರೆ.

ಮಳೆಯ ಹಿನ್ನೆಲೆಯಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಇದನ್ನು ಮುಂದಿನ ಒಂದು ವಾರದವರೆಗೂ ಮುಂದುವರಿಸಲಾಗಿದೆ.

ಯುಎಇನಲ್ಲಿ ಪ್ರತೀ ವರ್ಷ ಸಾಧಾರಣ ಮಳೆ ಮಾತ್ರ ಸುರಿಯುತ್ತದೆ. ಇದಕ್ಕೆ ಪೂರಕವಾಗಿ ಇಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಬಾರಿ ಮುಸಲಧಾರೆ ಸುರಿದ ಪರಿಣಾಮ ಚರಂಡಿ ವ್ಯವಸ್ಥೆ ಕೈಕೊಟ್ಟಿದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!