ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿನ ಸಿಂಹಿಣಿ ಮಾನ್ಯ ಇನ್ನಿಲ್ಲ

ಹೊಸ ದಿಗಂತ ವರದಿ, ಶಿವಮೊಗ್ಗ:

ಸಮೀಪದ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿನ ಸಿಂಹಿಣಿ ಮಾನ್ಯ(10 ವರ್ಷ) ಮಂಗಳವಾರ ಮೃತಪಟ್ಟಿದೆ. ಇದರಿಂದಾಗಿ ಲಯನ್ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ 5 ಕ್ಕೆ ಇಳಿದಿದೆ.
ಸಿಂಹಧಾಮದಲ್ಲಿ ಯಶವಂತ್ ಎಂಬ ಗಂಡು ಸಿಂಹದೊಂದಿಗೆ ಮಿಲನಕ್ಕೆ ಬಿಡಲಾಗಿತ್ತು. ಈ ವೇಳೆ ಪರಸ್ಪರ ಸಂಘರ್ಷಕ್ಕಿಳಿದ ಸಿಂಹಗಳು ಕಾದಾಟ ನಡೆಸಿವೆ. ಕಾದಾಟದಲ್ಲಿ ಮಾನ್ಯ ತೀವ್ರ ಗಾಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದೆ.
2011 ರಲ್ಲಿ ಮೈಸೂರು ಮೃಗಾಲಯದಿಂದ ಬಂದ ಆರ್ಯ, ಮಾಲಿನಿ, ಮಾನ್ಯ ಮೂರು ಸಿಂಹಗಳ ಪೈಕಿ, ಆರ್ಯ ಹೊರತುಪಡಿಸಿ ಎರಡು ಸಿಂಹಿಣಿಗಳು ಅಸು ನೀಗಿವೆ. ಮೂರು ಗಂಡು-ಮೂರು ಹೆಣ್ಣು ಸಿಂಹಗಳಿದ್ದ ಸಫಾರಿಯಲ್ಲೀಗ ಸಿಂಹಗಳ ಸಂಖ್ಯೆ ಇಳಿಕೆ ಆಗಿದೆ.
ಒಂದು ವಾರದ ಹಿಂದೆ ಯಶವಂತ್ ಮತ್ತು ಮಾನ್ಯ ಕಾದಾಡಿಕೊಂಡಿದ್ದವು. ಈ ರೀತಿ ಕಾದಾಟ ಸರ್ವೇ ಸಾಮಾನ್ಯ. ಕಾದಾಟ ನಡೆದಾಗ ಸಿಂಹಗಳನ್ನು ಪ್ರತ್ಯೇಕಿಸಿ ಇಡಲಾಗುತ್ತದೆ. ಜಗಳದ ಸಂದರ್ಭದಲ್ಲಿ ಸಿಂಹಿಣಿ ತೀವ್ರತರ ಗಾಯವಾಗಿದ್ದರಿಂದ ಗುಣವಾಗದೆ ಅಸು ನೀಗಿದೆ ಎಂದು ಹುಲಿ ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಲ್ ಚಂದ್ ತಿಳಿಸಿದ್ದಾರೆ.
ಮೃತಪಟ್ಟ ಮಾನ್ಯ ಸಿಂಹದ ಬಗ್ಗೆ ಕಾನೂನು ರೀತಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹ ವಿಲೇ ಮಾಡಲಾಗಿದೆ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!