November 7, 2026
Saturday, November 7, 2026
spot_img

ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ಟ್ಯಾಕ್ಸ್‌ ಹಣದಿಂದ, ಹೀಗಾಗಿ ಅರಮನೆ ಸರ್ಕಾರದ್ದು: ಯತೀಂದ್ರ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಮೋದಾದೇವಿ ಅವರ ʼಮೈಸೂರು ಅರಮನೆಯನ್ನು ರಾಜರು ಕಟ್ಟಿಸಿದ್ದುʼ ಹೇಳಿಕೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಜರು ಅರಮನೆ ಕಟ್ಟಿಸಿದ್ದು ಹೌದು, ಆದರೆ ಹಣ ಎಲ್ಲಿಂದ ಬಂತು? ಎಲ್ಲವೂ ಜನರ ತೆರಿಗೆ ಹಣದಿಂದ. ಹೀಗಾಗಿ ಅರಮನೆ ಜನರಿಗೆ ಸೇರಿದ್ದು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಕೊಟ್ಟಿಲ್ಲ ಎಂದು ಪ್ರಮೋದಾ ದೇವಿ ಒಡೆಯರ್‌ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಸಿಂಹಾಸನ ಆಗಲಿ, ಅಂಬಾರಿ ಆಗಲಿ ಸರ್ಕಾರದ್ದು ಎಂದು ಎಲ್ಲಿಯೂ ಹೇಳಿಲ್ಲ. ಬಾಡಿಗೆ ಕೊಡ್ತಿದ್ದೇವೆ. ಅದನ್ನು ಅವರು ಗೌರವ ಧನ ಅಂತ ಹೇಳ್ತಿದ್ದಾರೆ. ಎಲ್ಲವೂ ಒಂದೇ ಎಂದಿದ್ದಾರೆ.

ಅರಮನೆ ಕಟ್ಟಿಸಿದ್ದು ಮಹಾರಾಜರೇ ಆದರೆ ಕಟ್ಟಿಸಲು ಹಣ ನೀಡಿದ್ದು ಜನರು. ಅವರ ತೆರಿಗೆ ಹಣದಿಂದಲೇ ರಾಜರಿಗೆ ಇಂತಹ ದೊಡ್ಡ ಅರಮನೆ ಕಟ್ಟೋಕೆ ಸಾಧ್ಯವಾಗಿದೆ. ಎಲ್ಲವೂ ಜನರಿಗೆ ಸೇರಬೇಕು ಎಂದಿದ್ದಾರೆ. ಪ್ರತೀ ವರ್ಷವೂ ರಾಜಮನೆತನದವರು ಹಾಗೂ ಸರ್ಕಾರದ ನಡುವಿನ ಸಾಮರಸ್ಯದಲ್ಲಿ ದಸರಾ ಹಬ್ಬ ನಡೆಯುತ್ತದೆ. ಈ ವರ್ಷ ಸ್ವಲ್ಪ ಗೊಂದಲಗಳಾಗಿವೆ. ಮುಂದಿನ ದಿನಗಳಲ್ಲಿ ಸಿಎಂ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದಿದ್ದಾರೆ.

Must Read