ಪಂಚೆಯುಟ್ಟ ರೈತರಿಗೆ ಎಂಟ್ರಿ ನಿರಾಕರಿಸಿದ್ದ ಮಾಲ್‌ಗೆ ಬೀಗ, ಇದೀಗ ಉತ್ತರ ಕೊಟ್ಟ ಜಿ.ಟಿ. ಮಾಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಂಚೆಯುಟ್ಟ ರೈತನಿಗೆ ಒಳಗಡೆ ಪ್ರವೇಶ ನೀಡದಿರಲು ಕಾರಣವೇನು ಎಂದು ಬಿಬಿಎಂಪಿ ಅಧಿಕಾರಿಗಳು ಜಿಟಿ ಮಾಲ್​​ಗೆ ನೋಟಿಸ್ ನೀಡಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ನೋಟಿಸ್​ಗೆ ​ಜಿಟಿ ಮಾಲ್ ಸಿಇಒ ಪ್ರಶಾಂತ್ ಆನಂದ್ ಉತ್ತರಿಸಿದ್ದು, ಘಟನೆಯಿಂದ ನಮಗೂ ತೀವ್ರ ಬೇಸರವಾಗಿದೆ. ಪಂಚೆ ನಮ್ಮ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಉಡುಗೆಯಾಗಿದೆ. ಜಿಟಿ ಮಾಲ್​ನಲ್ಲೂ ಸಾಕಷ್ಟು ಮಳಿಗೆಗಳಲ್ಲಿ ಪಂಚೆ ಮಾರಲಾಗುತ್ತಿದೆ. ರೈತನನ್ನು ಒಳಗೆ ಬಿಡದ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಪಂಚೆ ಧರಿಸುವವರಿಗೆ ಮಾಲ್ ಪ್ರವೇಶವಿಲ್ಲವೆಂಬುದು ಶುದ್ಧ ಸುಳ್ಳು. ಈ ಹಿಂದೆಯೂ ಹಲವು ಗ್ರಾಹಕರು ಪಂಚೆ ಧರಿಸಿ ಮಾಲ್​ಗೆ ಬಂದಿದ್ದಾರೆ. ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಉತ್ತರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!