ಕೊಡಗಿನ ಜನತೆಯ ನಿದ್ದೆಗೆಡಿಸಿದ ನರಹಂತಕ ಹುಲಿ ಕೊನೆಗೂ ಸೆರೆ!

ಹೊಸದಿಗಂತ ವರದಿ,ಮಡಿಕೇರಿ:

ದಕ್ಷಿಣ ಕೊಡಗಿನ ಕೆ.ಬಾಡಗ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ‌ ಒಂದೇ ಕುಟುಂಬದ ಇಬ್ಬರನ್ನು ಬಲಿ ಪಡೆದ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ನಾಗರಹೊಳೆ ಗಡಿಭಾಗದ ನಾಣಚ್ಚಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ 12.30ರಿಂದ 1ಗಂಟೆಯ ನಡುವಿನ ಅವಧಿಯಲ್ಲಿ ಹುಲಿಯನ್ನು ಸೆರೆಹಿಡಿಯಲಾಗಿದೆ.

ಇದು ಸುಮಾರು 10ವರ್ಷ ಪ್ರಾಯದ ಹೆಣ್ಣು ಹುಲಿಯಾಗಿದ್ದು, ಇದನ್ನು ಮೈಸೂರು ಹೊರವಲಯದ ಕೂರ್ಗಳ್ಳಿ ಹುಲಿ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಹುಣಸೂರು ಸಮೀಪ ಡಿ.ಬಿ.ಕುಪ್ಪೆ ವಲಯದಲ್ಲಿಯೂ ಹೆಣ್ಣು ಹುಲಿಯೊಂದನ್ನು ಸೆರೆಹಿಡಿಯಲಾಗಿರುವುದಾಗಿ ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!