Thursday, June 1, 2023

Latest Posts

ಪ್ರಧಾನಿ ಮೋದಿ ಬಳಿ ಎಸೆದ ಮೊಬೈಲ್ ಮತ್ತೆ ಓನರ್ ಕೈ ಸೇರಿತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಸಾಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಹೂವಿನೊಂದಿಗೆ ಮೊಬೈಲ್ ಫೋನ್ ಕೂಡ ಮೋದಿ ಅವರಿದ್ದ ವಾಹನದ ಕಡೆ ಬಂದಿದ್ದು, ಸಾಕಷ್ಟು ಆತಂಕ ಸೃಷ್ಟಿಸಿತ್ತು. ಆದರೆ ಇದೀಗ ಮೊಬೈಲ್ ಮರಳ ಅದರ ಓನರ್ ಕೈ ಸೇರಿದೆ.

ರೋಡ್ ಶೋ ವೇಳೆ ಅಭಿಮಾನಿಗಳು ಪುಳಕಿತರಾಗಿದ್ದು, ಪ್ರಧಾನಿ ಮೋದಿ ಮೇಲೆ ಹೂವಿನ ಮಳೆಯನ್ನು ಸುರಿಸಿದ್ದರು. ಈ ವೇಳೆ ಕೈ ತಪ್ಪಿ ಹೂವಿನ ಜೊತೆ ಮೊಬೈಲ್‌ನ್ನೂ ಮಹಿಳೆ ಎಸೆದಿದ್ದು, ಸ್ವತಃ ಪ್ರಧಾನಿ ಮೋದಿ ಇದನ್ನು ಗಮನಿಸಿದ್ದರು. ಅಲ್ಲಿಯೇ ಆ ಮೊಬೈಲ್‌ನ್ನು ಮಹಿಳೆಗೆ ವಾಪಾಸ್ ನೀಡಿ ಎಂದು ಪ್ರಧಾನಿ ಸನ್ಹೆ ಮಾಡಿದ್ದರು. ಪ್ರಚಾರ ವಾಹನದ ಮೇಲೆ ಫೋನ್ ಬಿದ್ದಿದ್ದು, ತದನಂತರ ಅದನ್ನು ಹಿಂದಿರುಗಿಸಲಾಗಿದೆ.

ಮಹಿಳೆ ಬಿಜೆಪಿ ಕಾರ್ಯಕರ್ತೆಯಾಗಿದ್ದು, ಹೂವನ್ನು ಎಸೆಯುವ ವೇಳೆ ಮಿಸ್ ಆಗಿ ಫೋನ್‌ನ್ನೂ ಎಸೆದಿದ್ದಾರೆ, ವಾಪಾಸ್ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!