Tuesday, May 30, 2023

Latest Posts

ರಾತ್ರಿಯಿಡೀ ಚಾರ್ಜ್‌ನಲ್ಲಿದ್ದ ಮೊಬೈಲ್ ಬ್ಲಾಸ್ಟ್, ಹೊತ್ತಿ ಉರಿದ ಅಂಗಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ರಾತ್ರಿ ಮೊಬೈಲ್‌ನ್ನು ಚಾರ್ಜ್‌ನಲ್ಲೇ ಇಡುವ ಅಭ್ಯಾಸ ನಿಮಗೂ ಇದೆಯಾ? ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು.

ಬೆಂಗಳೂರಿನ ವಿಜಯ ನಗರದಲ್ಲಿ ಮೊಬೈಲ್ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿದೆ. ಇದಕ್ಕೆ ಕಾರಣ ಚಾರ್ಜ್‌ನಲ್ಲಿಟ್ಟಿದ್ದ ಮೊಬೈಲ್ ಫೋನ್.

ಹೌದು, ರಾತ್ರಿ ಅಂಗಡಿ ಮುಚ್ಚುವ ವೇಳೆಫೋನ್ ಒಂದನ್ನು ಚಾರ್ಜ್‌ಗೆ ಹಾಕಿ ಬೆಳಗ್ಗೆ ಬಂದು ನೋಡಿದಾಗ ಅಂಗಡಿ ಧಗಧಗನೆ ಉರಿಯುತ್ತಿದೆ.

ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಅಗ್ನಿ ನಂದಿಸಿದ್ದಾರೆ. ಆದರೆ ದುಬಾರಿ ಬೆಲೆ ಬಾಳುವ ಮೊಬೈಲ್‌ಗಳು ಸುಟ್ಟು ಕರಕಲಾಗಿವೆ. ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!