ಮಳಲಿ ಮಸೀದಿ ವಿವಾದ ಕುರಿತು ಮುಂದುವರಿದ ಕೋರ್ಟ್ ವಿಚಾರಣೆ

ಹೊಸ ದಿಗಂತ ವರದಿ, ಮಂಗಳೂರು:

ನಗರದ ಹೊರವಲಯದ ಗುರುಪುರ ಸಮೀಪದ ಮಳಲಿ ಮಸೀದಿಯಲ್ಲಿ ಆರಂಭಗೊಂಡ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಮುಂದುವರಿದಿದೆ. ಮೇ 30ರಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ಆರಂಭಗೊಂಡ ವಾದ ಪ್ರತಿವಾದ ಮುಂದುವರೆಯುತ್ತಲೇ ಇದ್ದು, ಗುರುವಾರವೂ ಸುದೀರ್ಘ ವಿಚಾರಣೆ ನಡೆಯಿತು.
ಜ್ಞಾನವಾಪಿ ಮಾದರಿಯಲ್ಲಿ ಉತ್ಖನನ ನಡೆಸುವಂತೆ ವಿಶ್ವ ಹಿಂದು ಪರಿಷತ್ ಒತ್ತಾಯಿಸಿದ್ದು, ವಕೀಲ ಚಿದಾನಂದ ಕೆದಿಲಾಯ ವಕಾಲತ್ತು ನಡೆಸುತ್ತಿದ್ದಾರೆ.
ಗುರುವಾರದ ವಿಚಾರಣೆಯಲ್ಲಿ ಚಿದಾನಂದ ಕೆದಿಲಾಯ ಅವರು ವಿವಾದಿತ ಮಸೀದಿ ಜಾಗದ ಸರ್ವೆ ನಡೆಸಲು ಆದೇಶ ನೀಡುವಂತೆ ಕೋರಿ ವಾದ ಮಂಡಿಸಿದರು.
ಜೂ.೬ರ ವರೆಗೆ ನಡೆದ ವಿಚಾರಣೆಯಲ್ಲಿ ಮಸೀದಿ ಪರ ವಕೀಲ ಎಂ.ಪಿ.ಶೆಣೈ ಅವರು ವಾದ ಮಂಡಿಸಿದ್ದರು. ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿಯಾಗಿ ನಮೂದಾಗಿರುವುದರಿಂದ ಇದರ ವಿಚಾರಣೆ ನಡೆಸಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ. ಇದರ ಅಧಿಕಾರ ಇರುವುದು ವಕ್ಫ್ ಟ್ರಿಬ್ಯುನಲ್‌ಗೆ ಮಾತ್ರ ಎಂದು ವಾದಿಸಿದ್ದರು.
ಗುರುವಾರದ ವಿಚಾರಣೆಯಲ್ಲಿ ಚಿದಾನಂದ ಕೆದಿಲಾಯ ಅವರು, ನಮ್ಮ ಅರ್ಜಿದಾರರು ವಕ್ಫ್ ಆಸ್ತಿಯ ಬಗ್ಗೆ ಪ್ರಶ್ನಿಸಿಲ್ಲ.ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇವಸ್ಥಾನ ಎಂದು ಹೇಳಿದ್ದು, ಅದರ ಸಂರPಣೆ ಮಾಡುವಂತೆ ಅರ್ಜಿಯಲ್ಲಿ ಕೇಳಿzರೆ. ಅದು ಐತಿಹಾಸಿಕ ಸ್ಮಾರಕವೋ ಮಸೀದಿಯೋ ಎನ್ನುವುದನ್ನು ವಕ್ಫ್ ಟ್ರಿಬ್ಯೂನಲ್ ನಿರ್ಧರಿಸಲು ಆಗುವುದಿಲ್ಲ. ಆ ಜಾಗದ ಸರ್ವೆಗೆ ಆದೇಶ ಮಾಡಿದರೆ ನೈಜತೆಯ ಅನಾವರಣವಾಗಲಿದೆ ವಾದಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಶುಕ್ರವಾರಕ್ಕೆ(ಜೂ.೧೦) ಮುಂದೂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!