RECIPE| ಎಲ್ಲರೂ ಇಷ್ಟಪಡುವ ಈ ರಾಯತ ನಿಮಗೆ ಗೊತ್ತೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಯತ ಎಲ್ಲರಿಗೂ ಪ್ರಿಯ ಆಹಾರ. ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಇಷ್ಟ ಪಡುವ ರಾಯತ ತಯಾರು ಮಾಡೋದು ಅಷ್ಟೇನೂ ಕಷ್ಟವಲ್ಲ. ಹಾಗಾದ್ರೆ ರಾಯತ ಮಾಡೋದು ಹೇಗೆ ಅಂತಿರಾ? ಇಲ್ಲಿದೆ ರೆಸಿಪಿ.

ಬೇಕಾಗುವ ಸಾಮಾಗ್ರಿ:

150ಗ್ರಾಂ ಖಾರಾ ಬೂಂದಿ, ಅರ್ಧಲೀಟರ್‌ ಗಟ್ಟಿಮೊಸರು, ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಸ್ವಲ್ಪ ಇಂಗು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು, ತೆಂಗಿನೆಣ್ಣೆ.

ತಯಾರಿಸುವ ವಿಧಾನ: ಮೊಸರಿಗೆ ಉಪ್ಪು, ಖಾರದಪುಡಿ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಇದಕ್ಕೆ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ನೀಡಿ. ಖಾರಾಬೂಂದಿ ಸೇರಿಸಿ ಮಿಶ್ರಣ ಮಾಡಿ. ಇದರ ಮೇಲೆ ಕೊತ್ತಂಬರಿ ಸೊಪ್ಪು ಹರವಿ. ತಕ್ಷಣವೇ ಸರ್ವ್‌ಮಾಡಿ. ರುಚಿ ರುಚಿಯಾದ ರಾಯತ ಎಲ್ಲರಿಗೂ ಇಷ್ಟ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!