August 26, 2026
Wednesday, August 26, 2026
spot_img

ವಿಶ್ವಾದ್ಯಂತ ಬಹುನಿರೀಕ್ಷಿತ ʼಟಾಕ್ಸಿಕ್‌ʼ ಸಿನಿಮಾ ರಿಲೀಸ್‌: ಪ್ರೇಕ್ಷಕರ ರಿಯಾಕ್ಷನ್‌ ಹೇಗಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಹುದಿನಗಳಿಂದ ಜನ ಉತ್ಸುಕರಾಗಿ ಕಾಯುತ್ತಿದ್ದ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ಇಂದು ತೆರೆ ಮೇಲೆ ಅಬ್ಬರಿಸಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಶೋಗಳು ಆರಂಭವಾಗಿದ್ದು, ಥಿಯೇಟರ್ಸ್‌ ಹೌಸ್‌ ಫುಲ್‌ ಆಗಿದೆ. ರಾಕಿಂಗ್‌ ಸ್ಟಾರ್‌ ಯಶ್‌ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಹೂವುಗಳಿಂದ ಅಲಂಕಾರ ಮಾಡಿರುವ ಫ್ಯಾನ್ಸ್‌, ಸಿನಿಮಾ ನೋಡಿ ಸಕ್ಕತ್ತಾಗಿದೆ ಎಂದು ಹೇಳ್ತಿದ್ದಾರೆ.

‌ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರ ಕನಸಿನ ಕೂಸಾಗಿರುವ ಟಾಕ್ಸಿಕ್‌ ಸಿನಿಮಾ ನಾಳೆ ವಿಶ್ವಾದ್ಯಂತ ರಿಲೀಸ್‌ ಆಗುತ್ತಿದೆ. ಯಶ್‌, ರುಕ್ಮಿಣಿ ವಸಂತ್‌, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ನಯನತಾರಾ, ಬಾಲಾಜಿ ಮನೋಹರ್‌, ಅಕ್ಷಯ್‌ ಒಬೆರಾಯ್‌, ಸುದೇವ್‌ ನಾಯರ್‌ ಹಾಗೂ ಕೈಲ್‌ ಪಾಲ್‌ನಂತಹ ದಿಗ್ಗಜರು ನಟಿಸಿದ್ದಾರೆ.

ಪ್ರತೀ ಆಕ್ಟರ್‌ ಎಂಟ್ರಿಗೂ ಅದ್ಭುತ ಮ್ಯೂಸಿಕ್‌ ಇದೆ. ಸಿನಿಮಾ ಪ್ಲಾಟ್‌ ಹಾಗೂ ಟ್ವಿಸ್ಟ್‌ಗಳ ಬಗ್ಗೆ ಈಗಲೇ ಹೇಳೋದಿಲ್ಲ. ಸಿನಿಮಾ ಫಸ್ಟ್‌ ಹಾಫ್‌ ನಿಧಾನಕ್ಕೆ ಹೋದರೂ ಸೆಕೆಂಡ್‌ ಹಾಫ್‌ ಟ್ವಿಸ್ಟ್‌ಗಳ ಮೂಲಕ ಸುಸ್ತು ಮಾಡಿಬಿಡುತ್ತದೆ. ಆಕ್ಷನ್‌ ಸೀಕ್ವೆನ್ಸ್‌ಗಳಿ ಸರಿಸಾಟಿ ಇನ್ಯಾವುದೂ ಇಲ್ಲ ಹಾಗೆಯೇ ಯಶ್‌ ಹಾಗೂ ಕಿಯಾರಾ ಕೆಮಿಸ್ಟ್ರಿ ಅದ್ಭುತವಾಗಿದೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ. ಮೂರು ಗಂಟೆಯ ಸುದೀರ್ಘ ಸಿನಿಮಾ ಇದಾಗಿದ್ದು, ಸದ್ಯದ ಮಟ್ಟಿಗೆ ಅಭಿಮಾನಿಗಳು ಸಿನಿಮಾವನ್ನು ಎಂಜಾಯ್‌ ಮಾಡ್ತಿದ್ದಾರೆ ಎನ್ನುವಂತೆ ಕಾಣಿಸುತ್ತಿದೆ. ಕಲೆಕ್ಷನ್‌ ವೇಗ ನೋಡಿದರೆ ಸಿನಿಮಾ ನೂರು ಕೋಟಿ ಕ್ಲಬ್‌ ಸೇರೋದು ಗ್ಯಾರಂಟಿ ಎನ್ನಲಾಗಿದೆ.

ಕೆಲವರಿಗೆ ಮಾತ್ರ ಸಿನಿಮಾ ಇಷ್ಟವಾಗಿಲ್ಲ. ಸಿನಿಮಾ ತುಂಬಾ ಬರೀ ಜೋರು ಸದ್ದು, ಅರ್ಥವೇ ಆಗದ ಕಥೆ, ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಇಂಥ ಸಿನಿಮಾ ಮಾಡೋದು ಬೇಡವಾಗಿತ್ತು ಎಂದು ಫ್ಯಾನ್ಸ್‌ ಗರಂ ಆಗಿದ್ದಾರೆ.


Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !