ಆಗಸದಿಂದ ಅನಾವರಣವಾಯ್ತು ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟ್ರೋಫಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಭಾರತದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಟ್ರೋಫಿ ವಿಭಿನ್ನ ರೀತಿಯಲ್ಲಿ ಬಿಡುಗಡೆ ಆಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಬಿಸಿಸಿಐ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಆಗಸದಿಂದ ಅನಾವರಣ ಮಾಡಿದ್ದು, ಮೈ ನವಿರೇಳಿಸುವ ದೃಶ್ಯ ಇದಾಗಿತ್ತು.

ಅತ್ಯಾಧುನಿಕ 4ಕೆ ಕ್ಯಾಮೆರಾಗಳನ್ನು ಬಳಸಿ ಅದ್ಭುತವಾಗಿ ಆಗಸದಿಂದ ಟ್ರೋಫಿ ಅನಾವರಣ ಮಾಡಿದ್ದು, ಎಲ್ಲೆಡೆ ವಿಶ್ವಕಪ್ ಫೀವರ್ ಆರಂಭವಾಗಿದೆ. ಭೂಮಿಯಿಂದ ಸುಮಾರು 1,20,000 ಅಡಿ ಎತ್ತರದಲ್ಲಿ ಬಲೂನ್‌ಗೆ ಟ್ರೋಫಿಯನ್ನು ಕಟ್ಟಲಾಗಿತ್ತು.

ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಾನೆತ್ತರದಿಂದ ಟ್ರೋಫಿ ಕೆಳಗಿಳಿದಿದ್ದು, ನೋಡುಗರಿಗೆ ಹಬ್ಬವಾಗಿತ್ತು. ಗಗನಕ್ಕೇರಿದ ಮೊದಲ ಕ್ರೀಡಾ ಟ್ರೋಫಿ ಇದಾಗಿದ್ದು, ಬಿಸಿಸಿಐ ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಟೂರ್ನಿ ನಡೆಯಲಿದ್ದು, ಇಂದು ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!