ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೊಂದು ದೇಗುಲಕ್ಕೂ ಅದರದ್ದೇ ಆದ ಇತಿಹಾಸವಿದೆ, ಅಲ್ಲಿನ ವಿಶೇಷ ಗುಣಗಳಿಂದ ಭಕ್ತಾದಿಗಳು ಬಿಡದೇ ದೇಗುಲಕ್ಕೆ ಭೇಟಿ ನೀಡಿ ದೇವರ ದರುಶನ ಪಡೆಯುತ್ತಾರೆ. ಇಲ್ಲೊಂದು ದೇಗುಲವಿದೆ, ಇದರ ವಿಶೇಷತೆ ಏನು ಗೊತ್ತಾ? ಈ ದೇಗುಲದಲ್ಲಿರುವ ಹುತ್ತದ ಮಣ್ಣಿಗೆ ಎಲ್ಲ ರೀತಿಯ ಚರ್ಮ ರೋಗಗಳನ್ನು ನಿವಾರಿಸುವ ತಾಕತ್ತಿದೆಯಂತೆ.. ಯಾವ ದೇವಸ್ಥಾನ ನೋಡಿ..
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿಯಲ್ಲಿರುವ ಮತ್ತಿತಾಳೇಶ್ವರ ದೇವಸ್ಥಾನ ಪುರಾತನವಾದ್ದು, ಈ ದೇವಸ್ಥಾನವು ಮತ್ತಿ ಮರದ ಕೆಳಗೆ ಇರುವುದರಿಂದ ಈ ಸ್ಥಳಕ್ಕೆ ‘ಮತ್ತಿತ್ತಲೇಶ್ವರ’ ಅಥವಾ ಮತ್ತಿತಾಳೇಶ್ವರ ಎಂದು ಹೆಸರು ಬಂದಿದೆ. ಇಲ್ಲಿ ದೇವರ ಸುತ್ತ ಹುತ್ತವಿದ್ದು ಆ ಮಣ್ಣು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಎಲ್ಲಾ ರೀತಿಯ ಚರ್ಮ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಇದು ಒಳಗೊಂಡಿದೆ.
ಈ ದೇವಸ್ಥಾನದಲ್ಲಿ ನಾಗರ ಪಂಚಮಿಯ ಹೊರತಾಗಿ ಪ್ರತಿ ಭಾನುವಾರ ಮತ್ತು ಗುರುವಾರ ವಿಶೇಷ ಪೂಜೆ ನಡೆಯುತ್ತದೆ. ಚರ್ಮ ರೋಗಗಳಿಂದ ಬಳಲುತ್ತಿರುವವರು ಇಲ್ಲಿಗೆ ಬರುತ್ತಾರೆ. ನಂತರ ಪುರೋಹಿತರು ನೀಡುವ ದೇವರ ಮಣ್ಣನ್ನು ತೆಗೆದುಕೊಂಡು ಯಾವುದೇ ರೀತಿಯ ಚರ್ಮ ರೋಗವಿದ್ದರೂ ಆ ಜಾಗಕ್ಕೆ ಹಚ್ಚುವುದರಿಂದ ಇದು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಗಾಯಗಳು ಹಾಗೂ ಕಲೆಗಳು ಚರ್ಮ ರೋಗಗಳು ನಿವಾರಣೆಯಾಗಿವೆ ಎಂದು ಜನರು ಹೇಳುತ್ತಾರೆ.