Friday, March 24, 2023

Latest Posts

ಬಾನಂಗಳದಲ್ಲಿ ಶುರುವಾಯ್ತು ಲೋಹದ ಹಕ್ಕಿಗಳ ಕಲರವ: 5ದಿನ ಹಬ್ಬವೋ ಹಬ್ಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್ಲರ ಮೋಸ್ಟ್‌ ಫೇವರೆಟ್‌ ಬೆಂಗಳೂರಿನ ಏರ್‌ ಶೋಗೆ ಕೊನೆಗೂ ಚಾಲನೆ ಸಿಕ್ಕಿದೆ. ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯ ಏರ್‌ ಶೋ ನಡೆಯುತ್ತಿದ್ದು, ಬಾನಂಗಳಲ್ಲಿ ಲೋಹದ ಹಕ್ಕಿಗಳ ಕಲರವ ಶುರುವಾಗಿದೆ. ಇಂದಿನಿಂದ ಫೆಬ್ರವರಿ 17ರವರೆಗೆ ಐದು ದಿನಗಳ ಕಾಲ ಯಲಹಂಕ ಏರ್‌ ಬೇಸ್‌ನಲ್ಲಿ ಬಣ್ಣದ ಚಿತ್ತಾರ ಮೂಡಲಿದೆ. ಇಂದು ಚಾಲನೆ ನೀಡಿದ ಪ್ರಧಾನಿ ಮೋದಿ ಲೋಹದ ಹಕ್ಕಿಗಳ ಚಿತ್ತಾರ ಕಣ್ತುಂಬಿಕೊಂಡರು.

ಬಾನಿನಲ್ಲಿ ಸುನಾಮಿಯಂತೆ‌ ನುಗ್ಗುವ ಸುಖೋಯ್‌, ಮಿಂಚಿನಂತೆ ಓಡುತ್ತಿರುವ ತೇಜಸ್‌ ಸೂರ್ಯಕಿರಣ್‌, ಹೆಚ್‌ಎಎಲ್‌ ನಿರ್ಮಿತ ಲೈಟ್‌ ಯುಟಿಲಿಟಿ ಹೆಲಿಕಾಪ್ಟರ್‌, ಮುಂತಾದ ಭಾರತದ ವಾಯುಸೇನಾ ವಿಮಾನಗಳು ತಮ್ಮ ಕಸರತ್ತನ್ನು ಸಾರ್ವಜನಿಕರ ಮುಂದೆ ಪ್ರದರ್ಶನಕ್ಕಿಡುತ್ತವೆ. ಇಂದು 11ಗಂಟೆವರೆಗೂ ವೈಮಾನಿಕ ಪ್ರದರ್ಶನ ನಡೆಯಲಿದ್ದು, ನಂತರ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಮಿನಾರ್‌ಗಳು ನಡೆಯಲಿವೆ.

ಏರೋ ಇಂಡಿಯಾದಲ್ಲಿ 100ಕ್ಕೂ ಅಧಿಕ ದೇಶಗಳು ಭಾಗಿಯಾಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು, ಲೀಡರ್‌ಗಳು ಆಗಮಿಸುತ್ತಿದ್ದಾರೆ. ಅಮೆರಿಕ, ಬ್ರಿಟನ್​, ಇಸ್ರೇಲ್​, ಇಟಲಿ, ಜಪಾನ್​ ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್​​ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!