ಹೊಸದಿಗಂತ ವರದಿ, ಚೆಟ್ಟಳ್ಳಿ:
ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಕೊಡವ ಸಮಾಜದ ಸಭಾಂಗಣದಲ್ಲಿ ಕೊಂಗಂಡ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಉಪಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್ ಹಾಗೂ ನಿರ್ದೇಶಕರುಗಳು ಅಧಿಕಾರ ಸ್ವೀಕರಿಸಿದರು.
ಪದಗ್ರಹಣದ ನಂತರ ಮಂಡುವಂಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಕೊಡವ ಸಮಾಜದ ಅಭಿವೃದ್ಧಿ ಮತ್ತು ಜನರಲ್ ತಿಮ್ಮಯ್ಯ ಶಾಲಾ ಅಡಳಿತ ಮಂಡಳಿಗೆ ಆಯ್ಕೆಯ ಕುರಿತು ಚರ್ಚಿಸಲಾಯಿತು.
ಮಾಜಿ ಅಧ್ಯಕ್ಷ ಕೊಂಗಂಡ ದೇವಯ್ಯ ಮಾತನಾಡಿ ಸಮಾಜದ ಏಳಿಗೆಗೆ ಈ ಹಿಂದಿನ ಆಡಳಿತ ಮಂಡಳಿ ನೀಡಿದ ಕೊಡುಗೆಯನ್ನು ಸ್ಮರಿಸಿ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.
ಚೊಟ್ರುಮಾಡ ಕಾಶಿಅ ಚ್ಚಯ್ಯ ಪ್ರಾರ್ಥಿಸಿದರೆ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್ ವಂದಿಸಿದರು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ