Friday, December 9, 2022

Latest Posts

ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಹೊಸದಿಗಂತ ವರದಿ, ಸೋಮವಾರಪೇಟೆ(ಕೊಡಗು):
ನವವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರಪೇಟೆ ಪಟ್ಟಣ ಸಮೀಪದ ಮಸಗೋಡು ಗ್ರಾಮದ ಎಂ.ಎಸ್. ಶಿವಣ್ಣ ಅವರ ಪುತ್ರಿ ಶ್ವೇತಾ(28) ಎಂಬವರೇ ಸಾವಿಗೆ ಶರಣಾದವರು.
ಸಂಬಂಧಿಯೇ ಆಗಿರುವ ಅಭಿಷೇಕ್ ಅವರೊಂದಿಗೆ ಕಳೆದ 11 ತಿಂಗಳ ಹಿಂದೆಯಷ್ಟೇ ವಿವಾಹ ನೆರವೇರಿತ್ತು. ವಿವಾಹದ ನಂತರ ಪತಿ ಹಾಗೂ ಪತ್ನಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಗುರುವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಮನೆಯ ಮತ್ತೊಂದು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಶ್ವೇತಾ ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!