ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲು ಸಜ್ಜಾಗಿ ನಿಂತಿದ್ದು, 3 ಪಂದ್ಯಗಳ ಸರಣಿಗೆ ಆಸ್ಟ್ರೇಲಿಯಾ ಆತಿಥ್ಯವಹಿಸುತ್ತಿದೆ.
ಈ ಸರಣಿಯ ಮೊದಲ ಮ್ಯಾಚ್ ಡಿಸೆಂಬರ್ 5 ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9.50 AM ರಿಂದ ಶುರುವಾಗಲಿದೆ. ಇನ್ನು ಈ ಸರಣಿಯ ದ್ವಿತೀಯ ಪಂದ್ಯ ಭಾನುವಾರ ನಡೆಯಲಿದ್ದು, ಈ ಪಂದ್ಯಕ್ಕೆ ಬ್ರಿಸ್ಬೇನ್ ನ ಅಲೆನ್ ಬಾರ್ಡರ್ ಫೀಲ್ಡ್ ಮೈದಾನ ಆತಿಥ್ಯವಹಿಸಲಿದೆ.
ಹಾಗೆಯೇ ಬುಧವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯವು ಪರ್ತ್‌ನ WACA ಸ್ಟೇಡಿಯಂನಲ್ಲಿ ಜರುಗಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ 2 ಚಾನೆಲ್ಗಳಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಆಪ್ ಮತ್ತು ವೈಬ್ಸೈಟ್ನಲ್ಲೂ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
ಆಸ್ಟ್ರೇಲಿಯಾ ಮಹಿಳಾ ತಂಡ: ತಹ್ಲಿಯಾ ಮೆಕ್‌ಗ್ರಾತ್ (ನಾಯಕಿ), ಬೆತ್ ಮೂನಿ (ವಿಕೆಟ್ ಕೀಪತರ್), ಜಾರ್ಜಿಯಾ ವೋಲ್, ಎಲ್ಲಿಸ್ ಪೆರ್ರಿ, ಫೋಬೆ ಲಿಚ್‌ಫೀಲ್ಡ್, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್‌ಲ್ಯಾಂಡ್, ಅಲಾನಾ ಕಿಂಗ್, ಸೋಫಿ ಮೊಲಿನೆಕ್ಸ್, ಮೇಗನ್ ಶುಟ್, ಡಾರ್ಸಿ ಬ್ರೌನ್, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್.
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಪ್ರಿಯಾ ಪುನಿಯಾ, ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರಾಧಾ ಯಾದವ್, ಪ್ರಿಯಾ ಮಿಶ್ರಾ, ರೇಣುಕಾ ಠಾಕೂರ್ ಸಿಂಗ್, ಟಿಟಾಸ್ ಸಾಧು, ಸೈಮಾ ಠಾಕೂರ್, ಮಿನ್ನು ಮಣಿ, ತೇಜಲ್ ಹಸಬ್ನಿಸ್, ಉಮಾ ಚೆಟ್ರಿ, ಹರ್ಲೀನ್ ಡಿಯೋಲ್.