ದಿಗಂತ ವರದಿ ವಿಜಯಪುರ:
ಇಲ್ಲಿನ ಸೈನಿಕ ಶಾಲೆಯಲ್ಲಿ ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ ಸ್ಟ್ರಾಂಗ್ ರೂಂ ಓಪನ್ ಮಾಡುವ ವೇಳೆ ಅಧಿಕಾರಿಯೊಬ್ಬರ ಯಡವಟ್ಟು ಕಂಡು ಬಂದಿದ್ದು, ಸ್ಟ್ರಾಂಗ್ ರೂಂ ಕೀಯನ್ನು ಮನೆಯಲ್ಲಿ ಬಿಟ್ಟು ಬಂದಿರುವ ಘಟನೆ ನಡೆದಿದೆ.
ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಸ್ಟ್ರಾಂಗ್ ರೂಂ ಕೀ ತರದೆ ಯಡವಟ್ಟಿಗೆ ಕಾರಣರಾಗಿದ್ದು, ಸ್ಟ್ರಾಂಗ್ ರೂಂ ಓಪನ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ.
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಕೀ ಮನೆಯಲ್ಲಿಯೇ ಬಿಟ್ಟು ಬಂದಿದ್ದು, ಮರಳಿ ಮನೆಗೆ ತೆರಳಿ ಕೀ ತಂದಿದ್ದಾರೆ.
ಬಳಿಕ ಡಿಸಿ ಟಿ. ಭೂಬಾಲನ್, ಅಧಿಕಾರಿಗಳ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದ್ದು, ಬೆಳಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ.