ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದೊಂದಿಗಿನ ಹಳೆಯ ಸಂಬಂಧ ಕೊನೆಗೊಂಡಿದೆ ಎಂದು ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ.
ಅಮೆರಿಕ-ಕೆನಡಾ ಸಂಬಂಧವು ಪ್ರಮುಖ ಬದಲಾವಣೆಗೆ ಸಜ್ಜಾಗಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಹೊಸ ಸುಂಕಗಳ ನಂತರ ಅಮೆರಿಕದೊಂದಿಗಿನ ಹಳೆಯ ಸಂಬಂಧ ಮುಗಿದಿದೆ ಎಂದು ಮಾರ್ಕ್ ಕಾರ್ನಿ ಹೇಳಿದ್ದಾರೆ.
ಅಧ್ಯಕ್ಷರು ಅಮೆರಿಕವನ್ನು ಜಾಗತಿಕ ವ್ಯಾಪಾರ ಯುದ್ಧಕ್ಕೆ ತಳ್ಳಿದ್ದಾರೆ. ಮತ್ತೆ ಮತ್ತೆ ಹೊಸ ಸುಂಕಗಳು ಅನಿಶ್ಚಿತತೆಯನ್ನು ಹೆಚ್ಚಿಸುತ್ತಲೇ ಇದೆ ಎಂದು ಹೇಳಿದ್ದಾರೆ. ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ವಿದೇಶಿ ಕಾರು ಹಾಗೂ ಇತರೇ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದರು. ಅಲ್ಲದೇ ಈ ಸುಂಕ ನಿರ್ಧಾರ ಶಾಶ್ವತವಾಗಿರಲಿದೆ ಎಂದೂ ಸ್ಪಷ್ಟಪಡಿಸಿದ್ದರು.