ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ದಂಪತಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಇದೇ ಸಂದರ್ಭ ಅವರು ಪ್ರಧಾನಿ ಮೋದಿಯವರಿಗೆ ಮಧ್ವಾಚಾರ್ಯ ವಿರಚಿತ 750 ವರ್ಷಗಳ ಹಿಂದಿನ ಸಂರಕ್ಷಿತ ʼಸರ್ವಮೂಲʼ ಗ್ರಂಥವನ್ನು ಉಡುಗೊರೆಯಾಗಿ ನೀಡಿದರು.
ಈ ಕುರಿತು ಪೋಸ್ಟ್ ಮಾಡಿರುವ ಅವರು, ನಾನು ಮತ್ತು ಶಿವಶ್ರೀ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಪಡೆದುಕೊಂಡೆವು. ಅವರು ಎಂದಿನಂತೆ ಪ್ರೀತಿಯಿಂದ ನಮ್ಮನ್ನು ಹರಿಸಿ, ಆಶೀರ್ವಾದಿಸಿದರು. ಇದೇ ವೇಳೆ ನಮ್ಮ ಮದುವೆ ಫೋಟೋಗಳನ್ನು ವೀಕ್ಷಿಸಿದ್ದಾಗಿ ಹೇಳಿದಾಗ ಅಚ್ಚರಿಯೂ ಆಯಿತು ಎಂದರು.
ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಮಧ್ವಾಚಾರ್ಯ ವಿರಚಿತ 750 ವರ್ಷಗಳ ಹಿಂದಿನ ಸಂರಕ್ಷಿತ ʼಸರ್ವಮೂಲ ಗ್ರಂಥʼವನ್ನು ಉಡುಗೊರೆಯಾಗಿ ನೀಡಲಾಯಿತು. ಶತಮಾನಗಳ ಈ ಹಸ್ತಪ್ರತಿಯನ್ನು ಅತ್ಯಾಧುನಿಕ ವೇಫರ್ಫೀಚ್ ತಂತ್ರಜ್ಞಾನ ಬಳಕೆ ಮಾಡಿ ಸಂರಕ್ಷಿಸಲಾಗಿದೆ. ವೇಫರ್ಫೀಚ್ ಪೇಟೆಂಟ್ ಪಡೆದ ಅರೆವಾಹಕ ಉತ್ಪಾದನಾ ಆಧಾರಿತ ತಂತ್ರಜ್ಞಾನವಾಗಿದ್ದು, ಅಲ್ಲಿ ಸಿಲಿಕಾನ್ ವೇಫರ್‌ಗಳನ್ನು ಬಳಸಲಾಗುತ್ತದೆ. ಸಿಲಿಕಾನ್‌ನಲ್ಲಿ ಚಿನ್ನ ಅಥವಾ ಅಲ್ಯೂಮಿನಿಯಂ ಲೋಹದ ಶೇಖರಣೆಯನ್ನು ಬಳಸಿಕೊಂಡು ಬರವಣಿಗೆ ಮಾಡಲಾಗುತ್ತದೆ. ಈ ವೇಫರ್‌ಗಳು ಅಗ್ನಿ ನಿರೋಧಕ ಮತ್ತು ಜಲನಿರೋಧಕವಾಗಿದ್ದು ಸಾವಿರ ವರ್ಷಗಳವರೆಗೆ ಸಂರಕ್ಷಣೆ ಮಾಡುತ್ತದೆ. ಚಂದ್ರನ ಮೇಲೆ ಮನುಷ್ಯನು ಮೊದಲ ಬಾರಿ ಇಳಿದ ಸಂದರ್ಭದಲ್ಲಿ ಕೂಡ ಟೈಮ್ ಕ್ಯಾಪ್ಸುಲ್ ಅನ್ನು ಬಿಡಲು ಈ ತಂತ್ರಜ್ಞಾನವನ್ನು ನಾಸಾ ಬಳಸಿಕೊಂಡಿತ್ತು.
ಈ ಪ್ರಾಚೀನ ಹಸ್ತಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಲಾಗಿದೆ. ಇದನ್ನು ಆಧುನಿಕ ಮಾದರಿಯ ಪ್ರಾಚೀನ ಹಸ್ತ ಪ್ರತಿ ಸಂರಕ್ಷಿಸುವ ನನ್ನ ಕ್ಷೇತ್ರದಲ್ಲಿರುವ ಪ್ರಕಾಶನ ಎನ್ಜಿಎಂ ಮೂಲಕ ಪ್ರಧಾನಿ ಸಂರಕ್ಷಿಸಲಿದ್ದಾರೆ. ಈ ವೇಳೆ ಪ್ರಧಾನಿ ಈ ಪ್ರಾಚೀನ ಹಸ್ತಪ್ರತಿ ಸಂರಕ್ಷಣೆಯ ಪ್ರಕ್ರಿಯೆ ಕೇಳಿದ್ದು, ಸಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವ ಅಗತ್ಯದ ಕುರಿತು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವೂ ನಮ್ಮ ನಾಗರಿಕತೆಯ ಜ್ಞಾನದ ನಿಧಿಯಾಗಿರುವ ನಮ್ಮ ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸುವ ಧ್ಯೇಯವನ್ನು ಹೊಂದಿದೆ. ಇದಕ್ಕಾಗಿ ಪ್ರಧಾನಮಂತ್ರಿ ಅವರು ಜ್ಞಾನ ಭಾರತ ಮಿಷನ್ ಅನ್ನು ಪ್ರಾರಂಭಿಸಿದ್ದು, ಇದನ್ನು ಬೆಂಬಲಿಸಲು ಬಜೆಟ್ ಹಂಚಿಕೆಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದಕ್ಕೆ ನಾವು ಅದೃಷ್ಟಶಾಲಿಗಳಾಗಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.