July 23, 2026
Thursday, July 23, 2026
spot_img

ಮುತ್ತು ಕೊಟ್ಟವಳು..ತುತ್ತು ಇಟ್ಟವಳು..ಭೂಮಿ ಮೇಲೆ ಒಬ್ಬಳೇ….

ಮೊದಲ ಬಾರಿ ಕಣ್ಣು ತೆರೆದ ಕ್ಷಣದಿಂದಲೇ ನಮ್ಮ ಬದುಕಿನ ಕಥೆಯಲ್ಲಿ ಮೊದಲು ಕಾಣಿಸಿಕೊಳ್ಳುವ ಮುಖ ಅಮ್ಮಂದು. ಮಾತು ಬರುವ ಮೊದಲೇ ನಮ್ಮ ಅಳುವಿನ ಅರ್ಥ ತಿಳಿದುಕೊಳ್ಳುವಳು, ನಾವು ಕೇಳುವ ಮೊದಲೇ ಬೇಕಾದದ್ದನ್ನು ಕೈಗೆ ಕೊಡುವಳು, ತನ್ನ ಸುಖವನ್ನು ಬದಿಗಿಟ್ಟು ನಮ್ಮ ನಗುವಿನಲ್ಲೇ ತನ್ನ ಪ್ರಪಂಚವನ್ನು ಕಂಡುಕೊಳ್ಳುವಳು ಅಮ್ಮ….

ನಾವು ಬೀಳುವಾಗ ಎತ್ತಿ ನಿಲ್ಲಿಸುವ ಕೈ ಅವಳದ್ದು. ನಾವು ಸೋತಾಗ “ನೀನು ಮಾಡ್ತೀಯ” ಎಂದು ಧೈರ್ಯ ತುಂಬುವ ಧ್ವನಿ ಅವಳದ್ದು. ಹೊಟ್ಟೆ ಖಾಲಿ ಇದ್ದರೂ ಮಕ್ಕಳ ಹೊಟ್ಟೆ ತುಂಬಿದರೆ ಸಾಕು ಎನ್ನುವ ಆಕಾಶದಷ್ಟು ವಿಶಾಲ ಮನಸ್ಸು ಅವಳದ್ದು. ತನ್ನ ಕಣ್ಣೀರು ಮರೆಮಾಚಿ, ಮಕ್ಕಳ ಕನಸುಗಳಿಗೆ ಬಣ್ಣ ಹಚ್ಚುವ ಅದ್ಭುತ ಶಕ್ತಿ ಅಮ್ಮನಲ್ಲೇ ಇದೆ.

ಜಗತ್ತು ನಮ್ಮನ್ನು ಅರ್ಥ ಮಾಡಿಕೊಳ್ಳದೇ ಇರಬಹುದು. ಆದರೆ ಮಾತಾಡದೇ ಇದ್ದರೂ ನಮ್ಮ ಮನಸ್ಸಿನ ನೋವನ್ನು ಓದಿಕೊಳ್ಳುವ ಹೃದಯ ಅಮ್ಮನದು. ಅವಳ ಮುತ್ತಿನಲ್ಲಿ ಪ್ರೀತಿ ಇರುತ್ತದೆ, ಅವಳು ಇಡುವ ತುತ್ತಿನಲ್ಲಿ ಕಾಳಜಿ ಇರುತ್ತದೆ, ಬಯ್ಯುವ ಬೈಗುಳದಲ್ಲಿ ನಾವೆಂದೂ ನೋಡಿರದ ಮಮತೆ ಇದೆ, ಅವಳು ಮಾಡುವ ಪ್ರತಿಯೊಂದು ತ್ಯಾಗದಲ್ಲೂ ನಿಸ್ವಾರ್ಥತೆ ಇದೆ.

ನಿಜವಾಗಿಯೂ,
ಮುತ್ತು ಕೊಟ್ಟವಳು… ತುತ್ತು ಇಟ್ಟವಳು… ನಮ್ಮ ಬದುಕಿಗೆ ಅರ್ಥ ಕೊಟ್ಟವಳು… ಭೂಮಿ ಮೇಲೆ ಒಬ್ಬಳೇ ಇರೋಕೆ ಸಾಧ್ಯ ಅವಳೇ ಅಮ್ಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !