ಮಹಾ ಕುಂಭಮೇಳದಲ್ಲಿ ಅವ್ಯವಸ್ಥೆ ತಾಂಡವ ಎಂದ ವಿಪಕ್ಷಗಳು: ಹೇಮಾ ಮಾಲಿನಿ ಕೊಟ್ರು ತಿರುಗೇಟು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ವೇಳೆ ನಡೆದ ಕಾಲ್ತುಳಿತ ಪ್ರಕರಣ ಬಹುದೊಡ್ಡ ಘಟನೆಯಲ್ಲ ಎಂದು ಹೇಳಿದ್ದ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಇದೀಗ ಕುಂಭಮೇಳವನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಸತ್‌ ಭವನದ ಹೊರ ಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಂಭಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಫೆ. 26ರಂದು ಮಹಾ ಕುಂಭಮೇಳ ಮುಕ್ತಾಯವಾಗಲಿದ್ದು, ಅದಕ್ಕಿಂತ ಮುಂಚಿತವಾಗಿ ಪುಣ್ಯ ಸ್ನಾನ ಮಾಡಬೇಕು ಎನ್ನುವ ಧಾವಂತದಲ್ಲಿ ಭಕ್ತರು ಪ್ರಯಾಗ್‌ರಾಜ್‌ಗೆ ಧಾವಿಸುತ್ತಿದ್ದಾರೆ. ಹೀಗಾಗಿ ಸಣ್ಣಪುಟ್ಟ ಗೊಂದಲ ಎದುರಾಗಿದೆ. ಅದಾಗ್ಯೂ ಕುಂಭಮೇಳದ ವ್ಯವಸ್ಥೆ ಉತ್ತಮವಾಗಿದ್ದು, ಎಲ್ಲರೂ ಹೊಗಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಲ್ತುಳಿತ ಘಟನೆ ಸಂಭವಿಸಬಾರದಿತ್ತು. ಆದರೆ ಸಂಭವಿಸಿದೆ. ಈ ಕಾರಣಕ್ಕೆ ಇಡೀ ಕುಂಭಮೇಳವನ್ನು ದೂಷಿಸುವುದು, ವ್ಯವಸ್ಥೆ ವಿಫಲವಾಗಿದೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಪಿ ಸಂಸದರಿಂದ ವಾಗ್ದಾಳಿ
ಮಹಾ ಕುಂಭಮೇಳದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಸಂಸದರು ಮಾಡಿದ ಆರೋಪಕ್ಕೂ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ. ಆಹಾರ ಮತ್ತು ನೀರಿನ ಕೊರತೆಯಿಂದ ಭಕ್ತರು ಸಾಯುತ್ತಿದ್ದಾರೆ ಎಂದು ಎಸ್‌ಪಿ ನಾಯಕರು ಆರೋಪಿಸಿದ್ದಾರೆ.ಕೆಲವು ಸ್ಥಳಗಳಲ್ಲಿ ಸಮಸ್ಯೆಗಳಿವೆ. ಆದರೆ ಎಲ್ಲೆಡೆ ಇಲ್ಲ ಎಂದು ಹೇಮಾ ಮಾಲಿನಿ ತಿರುಗೇಟು ನೀಡಿದ್ದಾರೆ.

ಇಲ್ಲಿನ ವ್ಯವಸ್ಥೆ ತುಂಬ ಸಂಘಟಿತವಾಗಿದೆ. ಎಲ್ಲರೂ ಅದನ್ನು ಶ್ಲಾಘಿಸುತ್ತಿದ್ದಾರೆ. ಅಲ್ಲಿಗೆ ಹೋದ ನನ್ನ ಪರಿಚಯಸ್ಥರು ಕುಂಭಮೇಳವನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅಪಘಾತ ಸಂಭವಿಸಿದೆ. ಆದರೆ ಇದು ಕುಂಭಮೇಳದ ವೈಫಲ್ಯ ಎಂದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!