ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನಿಗೆ ಶಾಕ್‌ ಕೊಟ್ಟು ಸಾಯಿಸಿದ ಹುಡುಗಿಯ ಪಾಲಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ 20 ವರ್ಷದ ಹುಡುಗನೊಬ್ಬನಿಗೆ ವಿದ್ಯುತ್‌ ಶಾಕ್‌ ಕೊಟ್ಟು ಸಾಯಿಸಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ.

ಬಿಹಾರದ ಅರಾರಿಯಾ ಜಿಲ್ಲೆಯ ರಹರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತಪಟ್ಟ ಹುಡುಗನನ್ನು ಛೋಟು ಯಾದವ್‌ ಎಂದು ಗುರುತಿಸಲಾಗಿದೆ. ಆತ ಪಕ್ಕದ ಬರೌವಾ ಗ್ರಾಮದ ತನ್ನದೇ ವಯಸ್ಸಿನ ಹುಡುಗಿಯೊಂದಿಗೆ ಸಂಬಂಧವಿಟ್ಟುಕೊಡಿದ್ದ. ಇದನ್ನು ತಿಳಿದ ಹುಡುಗಿಯ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಬುಧವಾರ ತನ್ನನ್ನು ಭೇಟಿಯಾಗಲು ಬಾ ಎಂದು ಯುವತಿ ಛೋಟು ಯಾದವ್‌ ಬಳಿ ಬರಹೇಳಿದ್ದಳು. ಅಲ್ಲಿಗೆ ಹೋದ ಛೋಟು ಆಕೆಯೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಆಕೆಯ ತಂದೆ ಧೀರೇಂದ್ರ ಯಾದವ್, ಅವರ ಮಗ ಮತ್ತು ಅಳಿಯ ಚೋಟುವನ್ನು ಹಿಡಿದು ಕೋಣೆಯೊಳಗೆ ಬಂಧಿಸಿ ವಿದ್ಯುತ್‌ ಶಾಕ್‌ ನೀಡುವ ಮೂಲಕ ಶಿಕ್ಷೆ ಕೊಟ್ಟಿದ್ದಾರೆ. ಈ ವೇಳೆ ಛೂಟು ಯಾದವ್‌ ಮೃತಪಟ್ಟಿದ್ದಾನೆ.

ಆರೋಪಿಗಳು ಶವವನ್ನು ಮನೆಯೊಳಗೆ ಇಟ್ಟಿದ್ದರು. ಚೋಟು ಅವರ ತಂದೆ ಸೇರಿದಂತೆ ಕುಟುಂಬದವರು ಧೀರೇಂದ್ರ ಯಾದವ್ ಅವರ ಮನೆಗೆ ಹೋಗಿ ಪಂಚಾಯತ್ ಸದಸ್ಯರ ಸಹಾಯದಿಂದ ವಿಷಯದ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಉತ್ತರ ಕೊಡಲು ನಿರಾಕರಿಸಿದ್ದರು. ಕೊನೆಗೆ ಪೋಲೀಸ್‌ ತನಿಖೆಯ ವೇಳೆ ಈ ವಿಷಯ ಹೊರಬಿದ್ದಿದ್ದು ಕೃತ್ಯವೆಸಗಿದ ಧೀರೇಂದ್ರ ಯಾದವ್‌ ತಪ್ಪೊಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!