ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಜನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈರುಳ್ಳಿ ಬೆಲೆ ಶೇ.500ರಷ್ಟು ಏರಿಕೆಯಾಗಿದ್ದು ಬಹುತೇಕ ಎಲ್ಲಾ ಮೂಲಭೂತ ಅಗತ್ಯತೆಗಳು ಎಷ್ಟು ಹೆಚ್ಚಾಗಿದೆ ಎಂದರೆ ಸಾಮಾನ್ಯ ಜನರು ಅವುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ದೇಶಾದ್ಯಂತ ಬೆಲೆ ಏರಿಕೆ ಮಾತ್ರವಲ್ಲ, ಅಗತ್ಯ ವಸ್ತುಗಳ ಕೊರತೆಯೂ ಮುಂದುವರಿದಿದೆ. ಇದರಿಂದಾಗಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿ ಜನರು ಬೀದಿಗೆ ಬಂದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರ ಕಣ್ಣಿಗೆ ಬಿದ್ದ ಪಂಜಾಬ್ ರಾಜ್ಯದ ಗೃಹ ಸಚಿವರ ಮೇಲೆ ಶೂ ಎಸೆದಿದ್ದಾರೆ.
ಪಾಕಿಸ್ತಾನದ ಗೃಹಸಚಿವ ರಾಣಾ ಸನಾವುಲ್ಲಾ ಕಾರಿನ ಮೇಲೆ ಪ್ರತಿಭಟನಾಕಾರರು ಶೂ ಎಸೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜಾಬ್ ಅಸೆಂಬ್ಲಿಯ ಹೊರಗೆ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ನಡುವೆ ಕಾರನ್ನು ನಿಲ್ಲಿಸದೆ ಸ್ಥಳದಿಂದ ಸಚಿವ ಪರಾರಿಯಾಗಿದ್ದಾರೆ.
ಕೂಡಲೇ ಅಲ್ಲಿದ್ದ ಪತ್ರಕರ್ತರು ದಾಳಿಯ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸದಸ್ಯ ರಶೀದ್ ಹಫೀಜ್ ಅವರು ಪಂಜಾಬ್ ಅಸೆಂಬ್ಲಿಯಲ್ಲಿ ಶೂ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
Shoe hurled at the car of Rana Sanaullah outside Punjab Assembly. pic.twitter.com/PikUHRQ6av
— Mubarak Khan (@xdeadboiii) January 10, 2023