ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋದ ನಿಯಮವನ್ನು ಮೀರಿ ಗೋಬಿ ಮಂಚೂರಿ ತಿಂದಿದ್ದ ವ್ಯಕ್ತಿಗೆ ಮೆಟ್ರೋ 500 ರೂಪಾಯಿ ದಂಡ ವಿಧಿಸಿದೆ.
ಕೆಲ ದಿನಗಳ ಹಿಂದಷ್ಟೇ ಸುನಿಲ್ ಕುಮಾರ್ ಎಂಬಾತ ಸ್ನೇಹಿತರ ಜೊತೆ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, ಗೋಬಿ ತಿನ್ನುವ ವಿಡಿಯೋ ಮಾಡಲಾಗಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಮ್ಮ ಮೆಟ್ರೋ 500 ರೂಪಾಯಿ ದಂಡ ವಿಧಿಸಿದೆ.
ಎಲ್ಲ ಪ್ರಯಾಣಿಕರು ನಿಯಮ ಫಾಲೋ ಮಾಡುತ್ತಾರೆ, ಆದರೆ ಮಾಡದೇ ಇದ್ದವರನ್ನು ಹಾಗೇ ಬಿಡಲು ಆಗುವುದಿಲ್ಲ. ಜಯನಗರದಲ್ಲಿ ಭದ್ರತಾ ಸಿಬ್ಬಂದಿಗಳು ಕಾದು ಮೂವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅರ್ಧ ದಿನ ಠಾಣೆಯಲ್ಲಿಯೇ ಇರಿಸಿಕೊಂಡು ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ ಎಂದು ಮೆಟ್ರೋ ಸಿಬ್ಬಂದಿ ಹೇಳಿದ್ದಾರೆ.