ಚಂದ್ರನಲ್ಲಿ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ಚಿತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಚಂದ್ರಯಾನ- 3 ಯಶಸ್ಸಿಯಾಗಿ ಚಂದ್ರನ ಮೇಲೆ ಇಳಿದಿದ್ದು, ಇದಾದ ಬೆನ್ನಲ್ಲೇ ಲ್ಯಾಂಡರ್ ಮತ್ತು MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿದೆ.

ಇಸ್ರೋ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಚಂದ್ರನ ಮೇಲ್ಮೈಯ ಚಿತ್ರಗಳನ್ನು ಅವರೋಹಣ ಸಮಯದಲ್ಲಿ ತೆಗೆದಿದೆ. ಒಂದು ಚಂದ್ರಯಾನ 2 ಆರ್ಬಿಟರ್‌ನೊಂದಿಗೆ, ಎರಡನೆಯದು ನೇರವಾಗಿ ಇಸ್ರೋ ಕಮಾಂಡ್ ಸೆಂಟರ್‌ನೊಂದಿಗೆ ಹೀಗೆ ಚಂದ್ರಯಾನ 3 ಮಿಷನ್‌ನಲ್ಲಿ ದ್ವಿಮುಖ ಸಂವಹನ ಸೌಲಭ್ಯವಿದೆ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಸ್ಪರ್ಶಿಸಿದ ನಂತರ ವಿಕ್ರಮ್ ಲ್ಯಾಂಡರ್ ಹಂಚಿಕೊಂಡಿದೆ .

“ಭಾರತ ಚಂದ್ರನ ಮೇಲಿದೆ. ಚಂದ್ರಯಾನ-3 ಎಂದು ಕರೆಯಲ್ಪಡುವ ಇಸ್ರೋದ ಈ ಪ್ರಯತ್ನಕ್ಕೆ ಭಾರತ ಮತ್ತು ವಿದೇಶಗಳ ಎಲ್ಲಾ ಕೊಡುಗೆಗಳಿಗೆ ಮೆಚ್ಚುಗೆಗಳು ಮತ್ತು ಧನ್ಯವಾದಗಳು ಎಂದು ಇಸ್ರೋ ಟ್ವೀಟ್ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!