ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನವೊಂದು ಸೇತುವೆ ಕೆಳಗೆ ಸಿಲುಕಿ ಟ್ರಾಫಿಕ್ ಜಾಮ್‌ಗೆ ಕಾರಣವಾದ ಘಟನೆ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ!
ಅಚ್ಚರಿಯಾಗಬೇಡಿ, ಇದು ಆಗಸದಿಂದ ಇಳಿದ ವಿಮಾನವಲ್ಲ, ಗುಜರಿಗೆ ಲಾರಿಯ ಮೂಲಕ ಸಾಗಾಟವಾಗುತ್ತಿದ್ದ ವಿಮಾನ.
ಮುಂಬೈನಿಂದ ಅಸ್ಸಾಂಗೆ ಲಾರಿಯಲ್ಲಿ ಹೇರಿಕೊಂಡು ಸಾಗುತ್ತಿದ್ದ ಈ ಗುಜರಿ ವಿಮಾನ ಮೋತಿಹಾರಿಯ ಪಿಪ್ರಕೋತಿ ಸೇತುವೆ ದಾಟುತ್ತಿದ್ದ ವೇಲೆ ಸೇತುವೆ ನಡುವೆ ಸಿಲುಕಿಕೊಂಡಿದೆ. ಬಳಿಕ ಚಾಲಕರು ಮತ್ತು ಸ್ಥಳೀಯರ ಸಹಾಯದಿಂದ ವಿಮಾನವನ್ನು ಹೊರಗೆಳೆಯಲಾಗಿದೆ.
ಇದೇ ಮಾದರಿಯ ಘಟನೆ ಕಳೆದ ವರ್ಷ ನವೆಂಬರ್‌ನಲ್ಲಿ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಸ್ತೆಯ ಅಂಡರ್‌ಪಾಸ್‌ನಲ್ಲಿ ನಡೆದಿತತು.
ಅದಕ್ಕೂ ಮುನ್ನ ಸಪ್ಟೆಂಬರ್‌ನಲ್ಲಿ ಬೆಂಗಳೂರಿನ ಹೆಚ್ ಎ ಎಲ್ ಬಳಿ ಹೆಲಿಕಾಪ್ಟರ್ ಕೊಂಡೊಯ್ಯುತ್ತಿದ್ದಾಗ ರಸ್ತೆ ಮಧ್ಯೆ ಸಿಲುಕಿಕೊಂಡು ಟ್ರಾಫಿಕ್ ಜಾಂ ಉಂಟಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ