ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಗನ್ ಸೀಜ್ ಆಗಿದೆ.
ಕಮಿಷನರ್ ಆದೇಶದ ಬೆನ್ನಲ್ಲೇ ದರ್ಶನ್ ಗನ್ ಸೀಜ್ ಮಾಡಲಾಗಿದೆ. ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಲಾಗಿತ್ತು. ಪರವಾನಗಿ ರದ್ದು ಮಾಡಿದ್ದ ಬೆನ್ನಲ್ಲೆ ದರ್ಶನ್‌ಗೆ ಆರ್.ಆರ್ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಗನ್ ಲೈಸೆನ್ಸ್ ರದ್ದಾಗಿದೆ ಪಿಸ್ತೂಲ್ ಸರೆಂಡರ್ ಮಾಡಿ ಎಂದು ನೋಟಿಸ್ ನೀಡಲು ಹೋದಾಗ ಮನೆಯಲ್ಲೆ ದರ್ಶನ್ ಗನ್ ಸರೆಂಡರ್ ಮಾಡಿದ್ದಾರೆ.
ನೋಟಿಸ್ ನೀಡಲು ಮನೆಗೆ ಬಂದ ಆರ್ ಆರ್ ನಗರ ಪೊಲೀಸರಿಗೆ ನಟ ದರ್ಶನ್ ಅವರು ಗನ್ ಒಪ್ಪಿಸಿದ್ದಾರೆ. ನಟ ಗನ್ ತಮ್ಮ ಕೈನಲ್ಲಿಯೇ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಇದ್ಯಾವುದೂ ವರ್ಕೌಟ್ ಆಗಿರಲಿಲ್ಲ. ನಟ ಗನ್ ಸರೆಂಡರ್ ಮಾಡಲೇ ಬೇಕು ಎನ್ನಲಾಗಿತ್ತು. ಅದರಂತೆ ಈಗ ದರ್ಶನ್ ಅವರ ಗನ್ ಅನ್ನು ಅವರು ಪೊಲೀಸರಿಗೆ ಸರೆಂಡರ್ ಮಾಡಿದ್ದಾರೆ.