ದಿಗಂತ ವರದಿ ವಿಜಯಪುರ:
ಯುವತಿಗೆ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಪೊಲೀಸ್ ಪೇದೆಯೊಬ್ಬ ಕೈ ಕೊಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣೆಯ ವಿನಾಯಕ ಟಕ್ಕಳಕಿ ಎಂಬ ಪೇದೆಯಿಂದ ಯುವತಿಗೆ ವಂಚಿಸಿದವನು.
ವಿನಾಯಕ ಟಕ್ಕಳಕಿ ಎಂಬವನು ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸಿ ಮದುವೆಗೆ ನಿರಾಕಾರಣೆ ಮಾಡಿದ್ದಾನೆ. ಎಂದು ಎಫ್ ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ಆರೋಪಿ ವಿನಾಯಕ ಟಕ್ಕಳಕಿ ಕಳೆದ 20 ದಿನಗಳಿಂದ ಠಾಣೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈ ಕುರಿತು ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.