ದಿಗಂತ ವರದಿ ವಿಜಯಪುರ:
ಹೆರಿಗೆಗೆ ತೆರಳಿದ್ದ ಗರ್ಭಿಣಿಗೆ ಆಸ್ಪತ್ರೆ ಎದುರಲ್ಲೇ ಹೆರಿಗೆ ಆಗಿರುವ ಘಟನೆ ವಿಜಯಪುರ ತಾಲೂಕಿನ ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಶುಕ್ರವಾರ ನಡೆದಿದೆ.
ವಿಜಯಪುರ ತಾಲೂಕಿನ ಚವ್ಹಾಣ ದೊಡ್ಡಿಯ ಅನು ಬೇವು ಕೊಳೆಕರ ಎಂಬ ಗರ್ಭಿಣಿಗೆ ಹೆರಿಗೆ ಆಗಿದೆ.
ಅನು ಕೊಳೆಕರಗೆ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತರುವಾಗ ಹೆರಿಗೆ ಆಗಿದ್ದು, ಹೆರಿಗೆಯಾದ ಅರ್ಧ ಗಂಟೆ ಕಾಲ ನವಜಾತ ಶಿಶುವಿನ ಹೊಕ್ಕಳ ಹುರಿ ಕತ್ತರಿಸದೇ ಇದ್ದಿದ್ದರಿಂದ ಬಾಣಂತಿ ನರಳಾಟ ಅನುಭವಿಸಿದ್ದಾಳೆ. ಬಳಿಕ ಅರ್ಧ ಗಂಟೆ ನಂತರ ಆಗಮಿಸಿದ ಆಸ್ಪತ್ರೆಯ ಸಿಬ್ಬಂದಿ ಪ್ರಸವ ಕಾರ್ಯ ಪೂರ್ಣಗೊಳಿಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.