ಬಾಂಧವ್ಯ ಹೆಚ್ಚಿಸಬೇಕಿದ್ದ ಪ್ರೀವೆಡ್ಡಿಂಗ್ ಶೂಟ್, ಮದುವೆಯನ್ನೇ ಮುರಿದುಬಿಡ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗೆಲ್ಲಾ ಪ್ರೀ ವೆಡ್ಡಿಂಗ್ ಶೂಟ್ ಇಲ್ಲದೆ ಮದುವೆ ಆಗೋದೇ ಅಸಾಧ್ಯ ಎನ್ನುವ ಮಟ್ಟಿಗಿನ ಕ್ರೇಝ್ ಬೆಳೆದಿದೆ. ಮದುವೆ ನಿಶ್ಚಯವಾಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುವ ವೇಳೆ ವಧು ವರರ ಬಾಂಧವ್ಯ ಹೆಚ್ಚಾಗುತ್ತದೆ. ಆದರೆ ಛತ್ತೀಸ್‌ಗಢದಲ್ಲಿ ಇದೇ ಪ್ರೀ ವೆಡ್ಡಿಂಗ್ ಶೂಟ್‌ನಿಂದಾಗಿ ಮದುವೆಯೇ ಮುರಿದುಬಿದ್ದಿದೆ.

ಹೌದು, ಮದುವೆ ಬಗ್ಗೆ ವಧು ವರ ಇಬ್ಬರಿಗೂ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ ಮನೆಯವರಿಗೆ ಇಷ್ಟವಾದ ಕಾರಣ ಸುಮ್ಮನಿದ್ದರು. ತದನಂತರ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದರೆ ಬಾಂಧವ್ಯ ಹೆಚ್ಚುತ್ತದೆ ಎಂದು ಶೂಟ್‌ಗೆ ಕಳಿಸಿದ್ದು, ಹೊಂದಾಣಿಕೆ ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ವಧು ವರ ಬಂದಿದ್ದಾರೆ. ಮನೆಯವರಿಗೆ ತಿಳಿಸಿ ಮದುವೆ ಕ್ಯಾನ್ಸಲ್ ಮಾಡಿದ್ದು, ಶೂಟ್ ಫೋಟೊ ಡಿಲೀಟ್ ಮಾಡಿ ಇನ್ನೆಂದೂ ಬಳಸದಂತೆ ವರನ ಕುಟುಂಬಕ್ಕೆ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!