ತೈಲ ಬೆಲೆ ಏರಿಕೆಯ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸವಾಲು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿದ್ದು, ಇದರ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ.
ಈ ಕುರಿತಂತೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, 2010-11 ರಿಂದ 2022-23ನೇ ಸಾಲಿನಲ್ಲಿ ರಸ್ತೆ ತೆರಿಗೆ ಸಂಗ್ರಹ, ಪೆಟ್ರೋಲ್​ ಮತ್ತು ಡೀಸೆಲ್​ ಸೆಸ್​ ಮೂಲಕ 11.32 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದ್ದು, 11.37 ಲಕ್ಷ ಕೋಟಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
2017-18ರಿಂದ 2022-23ನೇ ಸಾಲಿನಲ್ಲಿ ಜಿಎಸ್​ಟಿ ಪರಿಹಾರ ಸಂಗ್ರಹದ 5.63 ಲಕ್ಷ ಕೋಟಿ ರೂ.ಗೆ ವಿರುದ್ಧವಾಗಿ 6.01 ಲಕ್ಷ ಕೋಟಿ ರೂ. ವಿನಿಯೋಗಿಸಿದ್ದೇವೆ. ಅದೇ ರೀತಿಯಾಗಿ 2013-14ರಿಂದ 2022-23ನೇ ಸಾಲಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ 3.77 ಲಕ್ಷ ಕೋಟಿ ರೂ. ಸೆಸ್​ಗೆ ವಿರುದ್ಧವಾಗಿ 3.94 ಲಕ್ಷ ಕೋಟಿ ರೂ. ಬಳಕೆ ಮಾಡಿದ್ದೇವೆ ಎಂದರು.
ಈ ಬಾರಿ ಕೇಂದ್ರ ಸರ್ಕಾರದ ತೆರಿಗೆಯಲ್ಲಿ 8.35 ಲಕ್ಷ ಕೋಟಿ ರೂ.ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದ್ದೇವೆ. 2020ರ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜಿಗಿಂತಲೂ ಇದು ಅಧಿಕ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!