ಅಯೋಧ್ಯೆ ರಾಮಮಂದಿರದಲ್ಲಿರೋ ಮೂರ್ತಿಗೆ ಹೊಸ ಹೆಸರಿಟ್ಟ ಅರ್ಚಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀರಾಮ ಮಂದಿರದಲ್ಲಿ ರಾಮಲಲಾ ವಿರಾಜಮಾನನಾಗಿದ್ದು, ದರ್ಶನ ಪಡೆಯಲು ಭಕ್ತರು ಉತ್ಸುಕರಾಗಿದ್ದಾರೆ.

ಅರ್ಚಕ ಅರುಣ್ ದೀಕ್ಷಿತ್ ಮಾರ್ಗದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನವರಿ 22ರ ಶುಭಮುಹೂರ್ತದಲ್ಲಿ ರಾಮ ಲಲಾ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿದ್ದಾರೆ.

ಇದೀಗ ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹ ರಾಮ ಲಲಾ ಹೆಸರಿನಿಂದ ಅಲ್ಲ, ಬಾಲಕ ರಾಮ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.

1949ರಲ್ಲಿ ಪ್ರತ್ಯಕ್ಷ ಗೊಂಡ ಹಾಗೂ ಇದುವರೆಗೆ ಆಯೋಧ್ಯೆಯಲ್ಲಿ ಪೂಜಿಸಲ್ಪಡುತ್ತಿದ್ದ ರಾಮ ಲಲಾನನ್ನೂ ಗರ್ಭಗುಡಿಯಲ್ಲಿ ಪ್ರತಿಷ್ಛಾಪಿಸಲಾಗಿದೆ. ಆದ್ರೆ ಹೊಸ ವಿಗ್ರಹ 5 ವರ್ಷದ ಬಾಲಕ ರಾಮನಾಗಿರುವ ಕಾರಣ ಬಾಲಕ ರಾಮ ಎಂದು ಕರೆಯಲ್ಪಡುತ್ತಾನೆ ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.

ಬಾಲಕರಾಮನ ನೋಡಿದಾಗ ನನ್ನ ಕಣ್ಣುಗಳು ತುಂಬಿ ಬಂತು. ಮುಖದಲ್ಲಿನ ಮಂದಹಾಸ, ದೈವೀಕ ಕಳೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದನ್ನು ಅನುಭವಿಸಲು ಬಾಲಕ ರಾಮನ ದರ್ಶನ ಪಡಯಬೇಕು ಎಂದಿದ್ದಾರೆ. 50 ರಿಂದ 60 ಪ್ರಾಣಪ್ರತಿಷ್ಠೆಯನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೇರವೇರಿಸಿದ್ದೇನೆ. ಆದರೆ ರಾಮ ಮಂದಿರದ ಪ್ರಾಣಪ್ರತಿಷ್ಠೆ ಅಧ್ಯಾತ್ಮಿಕ ಹಾಗೂ ಸರ್ವೋಚ್ಚ ಎಂದು ವಾರಣಾಸಿ ಮೂಲದ ಅರ್ಚಕ ಅರುಣ್ ದೀಕ್ಷಿತ್ ಹೇಳಿದ್ದಾರೆ.

ಬಾಲಕ ರಾಮನಿಗೆ ತೊಡಿಸಿರುವ ಆಭರಣ, ಕಿರೀಟಿಗಳನ್ನು ವಾಲ್ಮೀಕಿ ರಾಮಾಯಣ, ರಾಮಚರಿತ ಮಾನಸ, ಆಧ್ಯಾತ್ಮ ರಾಮಾಯಣದಲ್ಲಿ ಅಧ್ಯಯನ ನಡೆಸಿ ವಿನ್ಯಾಸಗೊಳಿಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!