ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ 20 ಸಭೆಯ ಬಳಿಕ ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಜುಗ್‌ನೌತ್ ಅವರು ಉತ್ತರ ಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್ ಪೂಜೆ ಸಲ್ಲಿಸಿದ್ದಾರೆ.
ದಶಾಶ್ವಮೇಧ ಘಾಟ್ ವಾರಾಣಸಿಯ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ.ಇದು ಗಂಗಾನದಿಯ ದಡದಲ್ಲಿದೆ ಹಾಗೂ ವಿಶ್ವನಾಥ ದೇವಾಲಯಕ್ಕೆ ಹತ್ತಿರದಲ್ಲಿದೆ.
ಮಾರಿಷಸ್ ಪ್ರಧಾನ ಮಂತ್ರಿ ಈ ಪ್ರವಾಸದ ವೇಳೆ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದರು. ಇಲ್ಲಿ ವಿಶೇಷ ಪೂಜೆ ನೆರವೇರಿಸಿದ ಅವರು, ಬಳಿಕ ನೇರವಾಗಿ ದಶಶ್ವಮೇಧ ಘಾಟ್ಗೆ ತೆರಳಿ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ, ಅವರ ಕುಟುಂಬ ಸದಸ್ಯರ ಉಪಸ್ಥಿತಿ ಇರಲಿದೆ.
ಲಾಲ್ ಬಹದ್ದೂರು ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ಅನುಸಾರ ಅವರಿಗೆ ಸ್ವಾಗತ ನೀಡಲಾಗಿದ್ದು, ಮಂಗಳವಾರ ಮಧ್ಯಾಹ್ನ ಅವರು ಮಾರಿಷಸ್ ಮರಳಲಿದ್ದಾರೆ.