Friday, March 24, 2023

Latest Posts

ಅಸ್ಸಾಂನಲ್ಲಿ ಪ್ರಧಾನಿಗೆ ಸಿಕ್ಕಿತು ಅದ್ದೂರಿ ಸ್ವಾಗತ: ರೋಡ್ ಶೋ ನಲ್ಲಿ ಕೇಳಿಸಿತು ಮೋದಿ…ಮೋದಿ ಜಯ ಘೋಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂಗೆ ಬಂದಿಳಿದ ಪ್ರಧಾನಿ ಮೋದಿ ಅವರು ಇಂದು ಭರ್ಜರಿ ರೋಡ್ ಶೋ ನಡೆಸಿದರು.

ಈ ವೇಳೆ ಗುವಾಹಟಿಯಲ್ಲಿ ರಸ್ತೆಬದಿಯಲ್ಲಿ ಪ್ರಧಾನಿಯವರನ್ನು ನೋಡಲುನೆರೆದಿದ್ದ ಸಾವಿರಾರು ಜನರುತಮ್ಮ ನೆಚ್ಚಿನ ನಾಯಕನ ಮೇಲೆ ಹೂವು ಸುರಿದರಲ್ಲದೆ, ಮೋದಿ.. ಮೋದಿ.. ಭಾರತ್ ಮಾತಾ ಕೀ ಜೈ ಎಂಬಿತ್ಯಾದಿ ಜಯ ಘೋಷಗಳನ್ನು ಕೂಗಿದರು.
ಅಸ್ಸಾಂ ಸಚಿವ ಸಂಪುಟದ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.


ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಮಂಗಳವಾರ ನಡೆದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಳಿಕ ಅಸ್ಸಾಂಗೆ ತಲುಪಿದರು.


ಬುಧವಾರ ಬೆಳಗ್ಗೆ 9:40ಕ್ಕೆ ಮೋದಿ ತ್ರಿಪುರಾಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಮಾಣಿಕ್ ಸಹಾ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!