ಮಂಡ್ಯದ ವಿಶಿಷ್ಟಚೇತನ ಯುವಕನಿಗೆ ಸಹಾಯ ಮಾಡಿದ ಪ್ರಧಾನಮಂತ್ರಿ ಕಚೇರಿ!

ಹೊಸದಿಗಂತ ವರದಿ,ಮಂಡ್ಯ:

ಸಾಮಾನ್ಯವಾಗಿ ಆಧಾರ್‌ಕಾರ್ಡ್ ಪಡೆಯುವುದು ಇಂದು ಸವಾಲಿನ ಕೆಲಸವಾಗಿದೆ. ಸರ್ವರ್, ಬೆರಳಚ್ಚು ಸೇರಿದಂತೆ ಹಲವು ತೊಂದರೆ ಎದುರಾಗುತ್ತವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪ್ರಧಾನಮಂತ್ರಿ ಕಚೇರಿಯಿಂದಲೇ ಆಧಾರ್ ಕಾರ್ಡ್ ಪಡೆಯಲು ನೆರವು ಸಿಕ್ಕಿದ್ದು, ಬರೋಬರಿ ಎರಡು ವರ್ಷದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಇದಕ್ಕೆ ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ತಾಲೂಕಿನ ತಂಡಸನಹಳ್ಳಿ ಗ್ರಾಮದ ಅಂಗವಿಕಲ ನೂತನ್ ಎನ್ನುವ 25 ವರ್ಷದ ಯುವಕನಿಗೆ ಪಿಎಂ ಕಚೇರಿಯಿಂದಲೇ ಆಧಾರ್ ಕಾರ್ಡ್ ಸಿಗುವಂತಾಗಿದೆ. ಇದರಿಂದಾಗಿ ಯುವಕನಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ ಸಿಗುವಂತಾಗಿದೆ.
ನೂತನ್ ಸುಮಾರು ವರ್ಷದ ಹಿಂದೆಯೇ ಆಧಾರ್‌ಕಾರ್ಡ್ ಮಾಡಿಸಿದ್ದನು. ಆದರೆ ಆ ವೇಳೆ ಮೊಬೈಲ್ ಸಂಖ್ಯೆ ನಮೂದಿಸಿರಲಿಲ್ಲ. ಈ ನಡುವೆ ಅಂದರೆ ಎರಡು ವರ್ಷದ ಹಿಂದೆ ಸರ್ಕಾರದಿಂದ ಈತನ ಬ್ಯಾಂಕ್ ಖಾತೆಗೆ ಹಣ ಬಾರದಿರುವುದನ್ನು ವಿಚಾರಿಸಲು ಹೋದಾಗ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಆಗದಿರುವ ಬಗ್ಗೆ ತಿಳಿಸಿದ್ದಾರೆ. ನಂತರ ಅಪ್‌ಡೇಟ್ ಮಾಡಿಸಿಕೊಳ್ಳಲು ಹೋದಾಗ ಸಾಧ್ಯವಾಗಿಲ್ಲ. ಕಾರಣ, ಯುವಕನಿಗೆ ಚರ್ಮದ ಸಮಸ್ಯೆ ಇದ್ದ ಕಾರಣ ಬಯೋಮೆಟ್ರಿಕ್ ತೆಗೆದುಕೊಂಡಿಲ್ಲ. ಇತ್ತ ಕಣ್ಣಿನ ಸ್ಕಾೃನ್ ಕೂಡ ಆಗಲಿಲ್ಲ.
ಇದರಿಂದಾಗಿ ಆಧಾರ್‌ಕಾರ್ಡ್ ಕೂಡ ಬ್ಲಾಕ್ ಆಗಿತ್ತು. ಪರಿಣಾಮ ಸರ್ಕಾರ ಸೌಲಭ್ಯವನ್ನು ಪಡೆಯಲಾಗದೇ ಪರಿತಪಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವನ್ನು ಭೇಟಿ ಮಾಡಲಾಗಿತ್ತಾದರೂ ಪ್ರಯೋಜನವಾಗಲಿಲ್ಲ. ಸಂಸದೆ ಸುಮಲತಾ ಅವರು ಪತ್ರ ಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಇದು ಕುಟುಂಬಸ್ಥರನ್ನು ಇನ್ನಷ್ಟು ಚಿಂತೇಗಿಡು ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!