Monday, October 2, 2023

Latest Posts

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ‘ರೆಡ್ ಐ’ ಸಮಸ್ಯೆ, ಆತಂಕ ದುಪ್ಪಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ರೆಡ್ ಐ ಸಮಸ್ಯೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಕಳೆದ ಮೂರ್ನಾಲ್ಕು ವಾರಗಳಲ್ಲಿ ಪ್ರಕರಣಗಳು ಏಕಾಏಕಿ ಹೆಚ್ಚಾಗಿದ್ದು, ಕಣ್ಣಿನ ನೋವು, ಉರಿ ಹಾಗೂ ಕಣ್ಣೀರು ಸುರಿಯುವ ಸಮಸ್ಯೆ ಇದಾಗಿದೆ.

ಮಕ್ಕಳಲ್ಲಿ ಅಷ್ಟೇ ಅಲ್ಲದೆ ದೊಡ್ಡವರಲ್ಲಿಯೂ ಸಮಸ್ಯೆ ಎದುರಾಗಿದ್ದು, ವೈರಾಣುವಿನಿಂದ ಸಮಸ್ಯೆ ಆರಂಭವಾಗಿದೆ. ಈ ಸಮಸ್ಯೆಗೆ ಯಾರು ಗುರಿಯಾಗುತ್ತಾರೆ?

ಅಲರ್ಜಿ ಅಸ್ತಮಾ ಹಾಗೂ ಡ್ರೈ ಐಸ್ ಸಮಸ್ಯೆ ಇರುವವರಿಗೆ ಮತ್ತು ಕಾಂಟಾಕ್ಟ್ ಲೆನ್ಸ್‌ಗಳನ್ನು ಬಳಕೆ ಮಾಡುವವರಿಗೆ ಈ ಸಮಸ್ಯೆ ಎದುರಾಗುತ್ತದೆ. ರೋಗಕ್ಕೆ ತುತ್ತಾದವರು ಮತ್ತೆ ಬೇರೆಯವರ ಸಂಪರ್ಕಕ್ಕೆ ಬಂದರೆ ಅವರಿಗೂ ಸಮಸ್ಯೆ ಬರುವ ಸಾಧ್ಯತೆ ಇದೆ, ಹಾಗಾಗಿ ಕಾಂಜಕ್ಟಿವೈಟಿಸ್‌ಗೆ ತುತ್ತಾದ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ವೈದ್ಯರು ಸೂಚಿಸಿದ್ದಾರೆ.

  • ರೆಡ್‌ಐ ಬಂದಿದೆ ಎಂದು ತಿಳಿಯೋದು ಹೇಗೆ?
    ಎರಡೂ ಕಣ್ಣುಗಳು ಕೆಂಪಗಾಗುವುದು
    ಎರಡೂ ಕಣ್ಣುಗಳಲ್ಲಿ ಉರಿ
    ಕಣ್ಣು ಉಜ್ಜುವಂತಾಗುವುದು
    ರಾತ್ರಿ ಮಲಗಿ ಬೆಳಗ್ಗೆ ಏಳುವಾಗ ಕಣ್ಣು ಬುಡಲು ಕಷ್ಟದಂತಾಗುವುದು, ದಪ್ಪ ಲೇಯರ್ ಫಾರ್ಮ್ ಆಗುವುದು
    ಸದಾ ಕಣ್ಣಿನಿಂದ ನೀರು ಹರಿಯುವುದು
    ತೀಕ್ಷ್ಣ ಬೆಳಕಿಗೆ ಕಣ್ಣು ಬಿಡಲು ಆಗದಿರುವುದು

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!