ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣದ ಪುರಲಕ್ಕಿ ಬೇಣದ ಜನವಸತಿ ಪ್ರದೇಶದಲ್ಲಿ ಕಂಡು ಬರುವ ಮೂಲಕ ಸ್ಥಳೀಯರ ಆತಂಕಕ್ಕೆ ಕಾರಣವಾದ ಹೆಬ್ಬಾವೊಂದನ್ನು ಉರಗ ರಕ್ಷಕ ಸೈಮನ್ ಮತ್ತು ಅವರ ಮಗ ಸ್ಯಾಮುವೆಲ್ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದರು.
ಪುರಲಕ್ಕಿ ಬೇಣದ ಮನೆಯೊಂದರ ಆವರಣದಲ್ಲಿ ಸುಮಾರು 10 ಅಡಿ ಉದ್ದದ 38 ಕೆ.ಜೆ ತೂಕದ ಹೆಬ್ಬಾವು ಯಾವುದೋ ಪ್ರಾಣಿಯನ್ನು ನುಂಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು.
ಸ್ಥಳಕ್ಕೆ ಆಗಮಿಸಿದ ಸೈಮನ್ ಮತ್ತು ಸ್ಯಾಮುವೆಲ್ ಪೊದೆಯಲ್ಲಿ ಅವಿತಿದ್ದ ಹೆಬ್ಬಾವನ್ನು ಅತ್ಯಂತ ಪ್ರಯಾಸಪಟ್ಟು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಿದರು.