Sunday, December 3, 2023

Latest Posts

Asian Games | 4×400 ಮೀ. ರಿಲೇಯಲ್ಲಿ ಭಾರತದ ಪದಕದ ಬೇಟೆ: ಪುರುಷರ ಟೀಮ್ ಚಿನ್ನ, ಮಹಿಳೆಯರಿಗೆ ಬೆಳ್ಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್​ ಗೇಮ್ಸ್​ನಲ್ಲಿ (Asian Games) ಭಾರತದ ಅಥ್ಲೀಟ್​ಗಳ ಪದಕಗ ಬೇಟೆ ಮುಂದುವರಿದಿದೆ. ಪುರುಷರ 4X400 ಮೀಟರ್​ ರಿಲೇ ತಂಡವೂ ಸ್ವರ್ಣ ಪದಕಕ್ಕೆ ಕೊರಳೊಡ್ಡಿದೆ.

ಈ ಮೂಲಕ ಭಾರತದ ಪದಕಗಳ ಚಿನ್ನದ ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಬುಧವಾರ ಮೂರು ಚಿನ್ನದ ಪದಕಗಳು ಲಭಿಸಿದಂತಾಗಿದೆ.

ಮೊಹಮ್ಮದ್ ಅನಾಸ್ ಯ್ಯಾಯ್ಯಾ, ಅಮೋಜ್ ಜಾಕೋಬ್​, ಮೊಹಮ್ಮದ್ ಅಜ್ಮಲ್​ ಹಾಗೂ ರಾಜೇಶ್ ರಮೇಶ್ ಅವರಿದ್ದ ಪುರುಷರ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 3.01. 58 ಸೆಕೆಂಡ್​ಗಳಲ್ಲಿ ಓಟ ಮುಗಿಸಿದ ಈ ತಂಡ ರಾಷ್ಟ್ರೀಯ ದಾಖಲೆಯನ್ನೂ ಮುರಿದಿದೆ.

ಮಹಿಳೆಯರ 4×400 ಮೀ. ರಿಲೇ ತಂಡಕ್ಕೆ ಬೆಳ್ಳಿ ಪದಕ ಬಂದಿದೆ. ವಿತ್ಯಾ ರಾಮರಾಜ್, ಐಶ್ವರ್ಯ ಮಿಶ್ರಾ, ಪ್ರಾಚಿ ಮತ್ತು ಶುಭಾ ವೆಂಕಟೇಶನ್ ಒಳಗೊಂಡ ಭಾರತೀಯ ಮಹಿಳಾ 4×400 ಮೀ. ರಿಲೇ ತಂಡ ಏಷ್ಯಾಡ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ. 2014ರ ಏಷ್ಯನ್​ ಗೇಮ್ಸ್​ನ ಸಮಯದ ದಾಖಲೆಯನ್ನು ಮುರಿದರು. ಈ ಬಾರಿ ನಾಲ್ವರ ಜೋಡಿ 3:28.68 ಸೆಕೆಂಡಿನ ಸಮಯದಿಂದ ಬೆಳ್ಳಿ ಜಯಿಸಿದೆ. 3:27.65 ಸಮಯದಲ್ಲಿ ಗೆರೆ ತಲುಪಿ ಬಹ್ರೇನ್ ಚಿನ್ನ ಗೆದ್ದರೆ, ಶ್ರೀಲಂಕಾ ಮಹಿಳೆ ಕಂಚಿಗೆ ತೃಪ್ತಿ ಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!