CINE | ಕಡೆಗೂ ಫಿಕ್ಸ್‌ ಆಯ್ತು ಕಂಗನಾ ನಟನೆಯ ಎಮರ್ಜೆನ್ಸಿ ಸಿನಿಮಾ ರಿಲೀಸ್‌ ಡೇಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್ ಬೆಡಗಿ ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಎಮರ್ಜೆನ್ಸಿ’ ಚಿತ್ರ ಥಿಯೇಟರ್‌ಗೆ ಲಗ್ಗೆಯಿಡಲು ಸಿದ್ಧವಾಗಿದೆ. ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದೆ.

ಈ ಹಿಂದೆ ಟ್ರೈಲರ್ ಮೂಲಕ ರಿಲೀಸ್ ಡೇಟ್‌ನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸೆಪ್ಟೆಂಬರ್ 6ರಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಕ್ಕೆ ಸೆನ್ಸಾರ್ ಸಿಗದೆ ರಿಲೀಸ್‌ಗೆ ವಿಳಂಬವಾಗಿತ್ತು. 2025ರ ಜನವರಿ 17ರಂದು ‘ಎಮರ್ಜೆನ್ಸಿ’ ಚಿತ್ರ ರಿಲೀಸ್ ಆಗಲಿದೆ ಎಂದು ಕಂಗನಾ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!