ಶಾಲಾ ಶಿಕ್ಷಕರನ್ನು ಎಕ್ಸ್ಪೋಸ್ ಮಾಡಿದ ರಿಪೋರ್ಟರ್?- ಈ ವೈರಲ್ ವಿಡಿಯೊದ ಸತ್ಯವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕರಿಗೆ ಏನೂ ತಿಳಿದಿಲ್ಲ ಎಂಬ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಅಸಲಿ ವಿಡಿಯೋದ ಒಂದು ತುಣುಕನ್ನು ಮಾತ್ರ ಶೇರ್‌ ಮಾಡಿ ಕೆಲವರು ಶಿಕ್ಷಣ ವ್ಯವಸ್ಥೆ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಸತ್ಯಾಂಶ ಏನಂದ್ರೆ ಇದು ಮನರಂಜನೆಗಾಗಿ ಮಾಡಿರುವ ವಿಡಿಯೋ ಆಗಿದೆ.

ಹರ್ಷ ರಜಪೂತ್‌ ಎಂಬ ಒಬ್ಬ ಯೂಟ್ಯೂಬರ್‌ನನ್ನು ಪತ್ರಕರ್ತನಾಗಿ ಬಿಂಬಿಸಲಾಗುತ್ತಿದೆ. ಆತ ಮಾಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡದೆ ಕೇವಲ ವಿಡಿಯೋದ ಒಂದು ತುಣುಕನ್ನು ಮಾತ್ರ ಎಲ್ಲೆಡೆ ವೈರಲ್‌ ಮಾಡಿ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ. ಮೂಲ ವಿಡಿಯೋದಲ್ಲಿ ಇದೊಂದು ಸ್ಕ್ರಿಪ್ಟ್‌ ಆಧಾರಿತ ಸ್ಕಿಟ್‌ ಆಗಿದ್ದು, ಮನರಂಜನೆಗಾಗಿ ಮಾತ್ರ ಮಾಡಲ್ಪಟ್ಟಿದೆ. ಯಾವುದೇ ಶಿಕ್ಷಣ ಸಂಸ್ಥೆಯ ಚಿತ್ರಣವನ್ನು ಘಾಸಿಗೊಳಿಸುವ ಅಥವಾ ಕೆಡಿಸುವ ಉದ್ದೇಶ ನಮಗಿಲ್ಲ ಎಂದು ಸ್ವತಃ ತಾನೇ ಬರೆದುಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!