ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆ, ಮಿಂಚು ಗುಡುಗುಗಳ ಲೈವ್ ಎಫೆಕ್ಟ್ಸ್ ಕೊಡೋದು, ಯುದ್ಧ ಸಂದರ್ಭಗಳಲ್ಲಿ ಇದ್ದಿದ್ದರೆ ಏನಾಗುತ್ತಿತ್ತು ಎನ್ನುವ ಭೀತಿ ಹುಟ್ಟಿಸುವಂತೆ, ಯುದ್ಧಭೂಮಿಯಲ್ಲೇ ನಿಂತ ರಿಪೋರ್ಟರ್ ಬಾಂಬ್ಗಳಿಂದ ತಪ್ಪಿಸಿಕೊಳ್ಳುವುದನ್ನು ನೋಡಿದ್ದೀರಿ. ಆದರೆ ಪಾಕಿಸ್ತಾನದ ಪತ್ರಕರ್ತನೊಬ್ಬ ಜನರಿಗೆ ನೀರಿನ ಆಳ ತಿಳಿಸೋದಕ್ಕೆ ನೀರಿಗೆ ಹಾರಿದ್ದಾನೆ.
ಹೌದು, ನೀರು ತುಂಬಾ ಆಳ ಇದ್ದಂತೆ ಕಾಣುತ್ತದೆ ಎಂದು ಹೇಳುತ್ತಾ, ನೀರಿಗೆ ಹಾರಿದ್ದು, ತುಂಬಾ ಆಳ ಇದೆ, ಕಾಳಿಗೆ ತಳ ಸಿಗುತ್ತಿಲ್ಲ ಎಂದು ಹೇಳಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ. ಈತ ಪಬ್ಲಿಸಿಟಿಗಾಗಿ ಈ ರೀತಿ ವಿಡಿಯೋ ಮಾಡಿದ್ದಾನೋ ಅಥವಾ ಕರ್ತವ್ಯನಿಷ್ಠೆಯಿಂದ ಮಾಡಿದ್ದಾನೋ ತಿಳಿದುಬಂದಿಲ್ಲ.
https://twitter.com/nailainayat/status/1668939880548691974?s=20