ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ನಿವಾಸಿ ರವೀಂದ್ರ ಎಂಬವರು ಜ.೫ರಂದು ಬೆಂಗಳೂರು ನಗರದ ಈಜಿಪುರ ಪರಿಸರದಿಂದ ಕಾಣೆಯಾಗಿದ್ದು, ಇವರನ್ನು ಹುಡುಕಿಕೊಟ್ಟವರಿಗೆ ಮನೆಮಂದಿ ಐದು ಸಾವಿರ ರೂ.ಗಳ ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ರವೀಂದ್ರ ಅವರು ಕಾಣೆಯಾಗುವ ಸಂದರ್ಭ ಕಿತ್ತಳೆ ಬಣ್ಣದ ಅರ್ಧ ತೋಳಿನ ಅಂಗಿ ಧರಿಸಿದ್ದು, ಮಂಗಳೂರಿನ ವಿಳಾಸವನ್ನು ಹೊಂದಿರುವ ಐಡಿ ಪಾಸ್ ಅನ್ನು ಹೊಂದಿದ್ದಾರೆ.
ಸ್ವಲ್ಪ ಕಿವುಡುತನ ಹೊಂದಿರುವ ಅವರು ಸರಿಯಾದ ಮನಃಸ್ಥಿತಿಯಲ್ಲಿಲ್ಲ. ಅವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್ ಅಥವಾ ಅವರ ಪುತ್ರ ಶ್ರೀಕೇತ್ ಅವರನ್ನು 7899928706, 9900517026 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.