ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ಐಪಿಎಸ್ ಅಧಿಕಾರಿಯಾಗಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿಯನ್ನು ಘೋಷಣೆ ಮಾಡಿದ್ದು, ಇದೀಗ ಅವರ ನಿವೃತ್ತಿ ಕೋರಿ ಪತ್ರವನ್ನುರಾಜ್ಯ ಸರಕಾರ ಅಂಗೀಕರಿಸಿದೆ.
ಪ್ರತಾಪ್ ರೆಡ್ಡಿ ಅವರನ್ನು ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತಿಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಪ್ರತಾಪ್ ರೆಡ್ಡಿ ಅವರು ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಅವರು ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ ಇಲಾಖೆಯಿಂದ ಬಿಡುಗಡೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಪುರಸ್ಕರಿಸಿರುವ ರಾಜ್ಯ ಸರ್ಕಾರ ಏಪ್ರಿಲ್ 30ಕ್ಕೆ ಬಿಡುಗಡೆಗೊಳಿಸುವಂತೆ ಸೂಚಿಸಿ ಆದೇಶಿಸಿದೆ.