ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಮತ ಎಣಿಕೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಷೇರುಗಳು ಭಾರೀ ಕುಸಿತ (Stock Market Crash) ಕಂಡಿವೆ.
ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 40 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಆರ್ ಇ ಸಿ (REC) ಷೇರುಗಳು ಸುಮಾರು ಶೇ. 20ರಷ್ಟು ಕುಸಿತವಾಗಿದ್ದು, ಬಿ ಹೆಚ್ ಇ ಎಲ್ (BHEL) ಶೇ. 19ರಷ್ಟು ಕುಸಿದಿದೆ. ಗೈಲ್ (GAIL) ಶೇ. 18 ಮತ್ತು ಅದಾನಿ (adani) ಪೋರ್ಟ್ಸ್ ಶೇ. 17ರಷ್ಟು ಕುಸಿತವಾಗಿದೆ. ಅದಾನಿ ಎಂಟರ್‌ಪ್ರೈಸಸ್, ಹುಡ್ಕೊ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಒಎನ್‌ಜಿಸಿ ಮತ್ತು ಆರ್‌ಐಎಲ್ ಷೇರುಗಳು ಸಹ ಕುಸಿತದ ಹಾದಿಯಲ್ಲಿ ನಡೆದಿದೆ.
ಮತ ಎಣಿಕೆಯ ಆರಂಭದಲ್ಲಿ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಶೇಕಡಾ 3.03ರಷ್ಟು ಕುಸಿದು 22,557 ಕ್ಕೆ ತಲುಪಿದೆ ಮತ್ತು ಎಸ್ ಆಂಡ್ ಪಿ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 3ರಷ್ಟು ಕುಸಿದು 74,107ಕ್ಕೆ ಇಳಿದಿತ್ತು.
ಷೇರು ಮಾರುಕಟ್ಟೆ ಕುಸಿತವು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪೆನಿಗಳ ಮೇಲೆ ಭಾರಿ ನಷ್ಟವನ್ನುಂಟು ಮಾಡಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ 700ಕ್ಕೂ ಹೆಚ್ಚು ಕಂಪೆನಿಗಳು ಪೇಟಿಎಂ ಮತ್ತು ಐನಾಕ್ಸ್ ವಿಂಡ್ ಸೇರಿದಂತೆ ಅತೀ ಕಡಿಮೆ ಲಾಭಗಳಿಸಿತ್ತು.
ದಲಾಲ್ ಸ್ಟ್ರೀಟ್‌ನ ಕೆಲವು ವಲಯ ಮತ್ತು ಷೇರುಗಳು ಲಾಭವನ್ನು ಗಳಿಸಿವೆ. ಎಫ್‌ಎಂಸಿಜಿ ವಲಯವು ವಿಶಾಲವಾದ ನಷ್ಟಗಳ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಎಚ್‌ಯುಎಲ್ ಮತ್ತು ಬ್ರಿಟಾನಿಯಾದಂತಹ ಷೇರುಗಳು ತೀವ್ರ ನಷ್ಟ ಅನುಭವಿಸಿದೆ. ಎಚ್‌ಯುಎಲ್ ಷೇರುಗಳು ಎನ್‌ಎಸ್‌ಇಯಲ್ಲಿ ಶೇ. 5.71ರಷ್ಟು ಏರಿಕೆಯಾಗಿ 2,490.45 ರೂ. ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬ್ರಿಟಾನಿಯಾ ಶೇ. 3.5ರಷ್ಟು ಏರಿಕೆಯಾಗಿ 5,348.25 ಕ್ಕೆ ತಲುಪಿದೆ.
30 ಷೇರುಗಳ ಸೆನ್ಸೆಕ್ಸ್ ಮಧ್ಯಾಹ್ನ ಒಂದು ಗಂಟೆಯ ಮೊದಲು 6,000 ಪಾಯಿಂಟ್‌ಗಳ ಕುಸಿತವನ್ನು ಹೊಂದಿದ್ದರೆ, ಬಳಿಕ ಅದು 2 ಗಂಟೆ ಸುಮಾರಿಗೆ 3,372.15 ಪಾಯಿಂಟ್‌ಗಳ ಇಳಿಕೆಯೊಂದಿಗೆ 73,096.63 ಕ್ಕೆ ವಹಿವಾಟು ನಡೆಸಿತು. ಮತ್ತೊಂದೆಡೆ, ನಿಫ್ಟಿ 50 1,053.50 ಪಾಯಿಂಟ್‌ಗಳ ಇಳಿಕೆಯೊಂದಿಗೆ 21884.50ಕ್ಕೆ ವಹಿವಾಟು ಮುಗಿಸಿದೆ.
ಆರ್‌ಐಎಲ್ ಷೇರುದಾರರಿಗೂ ಭಾರಿ ನಷ್ಟ
ಮಾರುಕಟ್ಟೆಯ ಕುಸಿತದ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಷೇರುದಾರರು ಭಾರಿ ನಷ್ಟವನ್ನು ಅನುಭವಿಸಿದರು. ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ಶೇ. 9.6ನಷ್ಟು ಕುಸಿದವು. ಇದು 1.67 ಲಕ್ಷ ಕೋಟಿ ರೂ. ಗಳಷ್ಟು ನಷ್ಟಕ್ಕೆ ಕಾರಣವಾಯಿತು.
ಅದಾನಿ ಗ್ರೂಪ್ ಷೇರುಗಳಲ್ಲಿ ದೊಡ್ಡ ನಷ್ಟ
ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್‌ಗಳು ಶೇ. 25ರಷ್ಟು ಕುಸಿದು ಅದಾನಿ ಗ್ರೂಪ್ ಷೇರುಗಳಲ್ಲಿ ಕೆಲವು ದೊಡ್ಡ ನಷ್ಟವನ್ನು ಅನುಭವಿಸಿತ್ತು. ಮಂಗಳವಾರ ಮಧ್ಯಾಹ್ನ 1.22ರ ಸುಮಾರಿಗೆ, ಎನ್‌ಎಸ್‌ಇಯಲ್ಲಿ ಅದಾನಿ ಪೋರ್ಟ್ಸ್ ಷೇರುಗಳು ಶೇ. 16.07ರಷ್ಟು, ಅಂದರೆ 3,059.30 ರೂ.ಗೆ ಇಳಿದವು. ಆದರೆ ಅದಾನಿ ಪೋರ್ಟ್ಸ್ ಶೇ. 15.38 ಕಡಿಮೆಯಾಗಿ 1,340.30 ರೂ. ಗೆ ವಹಿವಾಟು ನಡೆಸಿತು.