ಹೊಸದಿಗಂತ ವರದಿ,ಹಾವೇರಿ:
೨೧ ವರ್ಷ ಗಡಿ ಭದ್ರತಾ ಪಡೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ನಿವೃತ್ತ ಯೋಧ ವೀರಣ್ಣ ಚನ್ನ ಶೆಟ್ಟರ್ ಅವರನ್ನು ತಾಲೂಕಿನ ಇಚ್ಚಂಗಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಗ್ರಾಮದ ಎಲ್ಲ ಸಮುದಾಯದ ಮುಖಂಡರು ಒಂದಾಗಿ ಬರಮಾಡಿಕೊಂಡರು.
ಗ್ರಾಮಕ್ಕೆ ಯೋಧ ಆಗಮಿಸುತ್ತದ್ದಂತೆ ಹೂ ಮಳೆಗೈದರು. ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರದ ವಾಹನದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ವೀರಣ್ಣ ಚನ್ನ ಶೆಟ್ಟರ್ ಮಾತನಾಡಿ, ೨೧ ವರ್ಷಗಳ ಕಾಲ ಭಾರತ ಮಾತೆಯ ಸೇವೆ ಸಲ್ಲಿಸಿರುವುದು ನನ್ನ ಸೌಭಾಗ್ಯ. ಸೇನೆಯಲ್ಲಿ ಸಿಕ್ಕ ಒಂದೊಂದು ಅನುಭವಗಳು ವಿಶಿಷ್ಠವಾಗಿವೆ. ಪ್ರತಿಯೊಬ್ಬರೂ ರೈತ, ಸೈನಿಕ, ಶಿಕ್ಷಕರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳೋಣ. ನಿವೃತ್ತಿ ಜೀವನವನ್ನು ಗ್ರಾಮದ ಅಭಿವೃದ್ಧಿಗೆ ಮುಡಿಪಾಗಿಡುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಗಪ್ಪ ಗೊಂದಿ, ಪ್ರವೀಣ್ ಹೂಗಾರ್, ಸಂಗಪ್ಪ ತಳವಾರ, ಬಸವರಾಜ್ ಹಿರೇಹಾಳ, ಮಲ್ಲಿಕಾರ್ಜುನ ಭದ್ರಾಪುರ್, ಮುತ್ತು ಹಡಪದ, ಈರಣ್ಣ ಸಂಕ್ಲಿಪೂರ್, ಈಶ್ವರಪ್ಪ ಇಟಗಿ ಸೇರಿದಂತೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕಿಯರು ಮತ್ತು ಎಸ್ ಡಿ ಎಂ ಸಿ ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು ಉಪಸ್ಥಿತರಿದ್ದರು.